ಸುಷ್ಮಾ ಸ್ವರಾಜ್ 
ದೇಶ

ನನ್ನ ಮಗಳು ನ್ಯಾಯವಾದಿ

ನನ್ನ ಮಗಳು ನ್ಯಾಯವಾದಿ ಮತ್ತು ಆಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪದವೀಧರೆ. ಟ್ವಿಟ್ಟರ್ ನಲ್ಲಿ ಬಂದಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ...

ನವದೆಹಲಿ:ಈಶಾನ್ಯ ರಾಜ್ಯ ಕೋಟಾ ಮೂಲಕ ಮಗಳಿಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಶಿಫಾರಸು ತೆಗೆದುಕೊಂಡಿದ್ದರು ಎಂದು ತಮ್ಮ ಬಗ್ಗೆ ಟ್ವಿಟ್ಟರ್ ನಲ್ಲಿ ಬಂದಿರುವ ಹೇಳಿಕೆಗೆ ವಿದೇಶಾಂಗ ಸಚಿವೆ ಸುಷ್ಮಾ  ಸ್ವರಾಜ್ ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳು ನ್ಯಾಯವಾದಿ ಮತ್ತು ಆಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪದವೀಧರೆ. ಟ್ವಿಟ್ಟರ್ ನಲ್ಲಿ ಬಂದಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಶಿಫಾರಸ್ಸು ಪಡೆಯಲು ಮತ್ತು ನೀಡಲು ಅಷ್ಟೊಂದು ಪ್ರಭಾವಿಯಲ್ಲ, ಅವರ ಮಗಳಿಗೆ ವೈದ್ಯಕೀಯ ಓದಲು ಈಶಾನ್ಯ ಕೋಟಾದಡಿ ಸೀಟು ಪಡೆದಿದ್ದರು ಎಂದು ಟ್ವಿಟ್ಟರ್ ನಲ್ಲಿ ಬಂದಿತ್ತು.

ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆ ಬಂದ ಕೂಡಲೇ ಟ್ವಿಟ್ಟರ್ ಮಾಡಿದವರು ಅದನ್ನು ತೆಗೆದುಹಾಕಿದ್ದರು. ಆದರೆ ಆ ಟ್ವೀಟನ್ನು ಬೇರೆಯವರು ಮರು ಟ್ವೀಟ್ ಮಾಡಿದ್ದರು.
 ಸುಷ್ಮಾ ಅವರಿಗೆ ಟ್ವಿಟ್ಟರ್ ಬೆಂಬಲಿಗರು, 'ನಾಯಿ ಬೊಗಳುತ್ತಿರುತ್ತದೆ', ಅದಕ್ಕೆ ಪ್ರತಿಕ್ರಿಯೆ ನೀಡದೆ, ತಮ್ಮ ಉತ್ತಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಪುತ್ರಿ ಬಲ್ಸುರಿ ವಕೀಲೆಯಾಗಿದ್ದು, ಲಲಿತ್ ಮೋದಿಯವರ ಪಾಸ್ ಪೋರ್ಟ್ ರದ್ದು ಕೇಸಿನಲ್ಲಿ ನ್ಯಾಯಾಲಯದ ಮುಂದೆ ಹಾಜರಾದ ವಿಚಾರದಲ್ಲಿ ಅವರ ಹೆಸರು ಕೇಳಿ ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್