ಸಾಂದರ್ಭಿಕ ಚಿತ್ರ 
ದೇಶ

ಚೀನಾದಲ್ಲಿ ಚೆಂದದ ಹುಡುಗರಿಗೆ ಕಾಲವಿಲ್ಲ

ಚೀನಾದ ನಿರ್ಜನ ರಸ್ತೆಯಲ್ಲಿ ಅದೂ ಒಂಟಿ ಹೆಣ್ಣು ಮಗಳೊಬ್ಬಳು ಸಂಚರಿಸುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಬೀಜಿಂಗ್: ಚೀನಾದ ನಿರ್ಜನ ರಸ್ತೆಯಲ್ಲಿ ಅದೂ ಒಂಟಿ ಹೆಣ್ಣು ಮಗಳೊಬ್ಬಳು ಸಂಚರಿಸುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೇಲಿನ ಸೀನ್ ಚೇಂಜ್ ಆಗಿದೆ. ಅಂದ್ರೆ ಹೆಣ್ಣಲ್ಲ ಗಂಡು ಸಂಚರಿಸೋದು ಕಷ್ಟವಾಗಿದೆ.

ಇನ್ನೇನು ಸ್ವಲ್ಪ ಯಾಮಾರಿದ್ದರೂ ಮಾನ ಮರ್ಯಾದೆ, ಶೀಲ ಹೋಗುವ ಪರಿಸ್ಥಿತಿ. ಈ ಗಂಡು ಹುಡುಗನದ್ದಾಗಿತ್ತು. ಈ ಮೂರನ್ನೂ ಉಳಿಸಿಕೊಂಡ ಬಾಲಕ ಸ್ವಲ್ಪದರಲ್ಲಿ  ಅತ್ಯಾಚಾರವಾಗುವದನ್ನು ತಪ್ಪಿಸಿಕೊಂಡಿದ್ದಾನೆ, ಇಷ್ಟಕ್ಕೆಲ್ಲಾ ಕಾರಣ ಆತನ ಅಂದವಂತೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಚೀನಾದ ಹೆಲಾಂಗ್ ಜಿಯಾಂಗ್ ಎಂಬ ನಗರದಲ್ಲಿ. ಲಿಟ್ಲ್ ಲಿಯು ಎಂಬ ಹುಡುಗ ಒಬ್ಬನೇ ಈ ನಗರದ ಬೀದಿಯಲ್ಲಿ ರಾತ್ರಿ ಮನೆಯತ್ತ ಹೋಗುತ್ತಿಲಿದ್ದ. ಇದೇ ಸಮಯದಲ್ಲಿ 20 ರ ಹರೆಯದ ಮೂವರು ಯುವತಿಯರು ವ್ಯಾನ್ ಚಲಾಯಿಸಿಕೊಂಡು ಬರುತ್ತಿದ್ದರು. ಆಗ ಅವರಿಗೆ ಲಿಯು ಕಣ್ಣಿಗೆ ಬಿದ್ದಿದ್ದಾನೆ, ತಕ್ಷಣ ವ್ಯಾನ್ ನಿಲ್ಲಿಸಿ ಲಿಯುನನ್ನು ಅಡ್ಡಗಟ್ಟಿದ್ದಾರೆ.

ನಂಬರ್ ಕೊಡು ಅಂದ್ರು:
ನೀನು ಒಬ್ಬಂಟಿಯಾಗಿದ್ದೀಯಾ? ನಿನಗಾರೂ ಗರ್ಲ್ ಫ್ರೆಂಡ್ ಇಲ್ಲವೇ ಎಂದು ಕೇಳಿದ ಯುವತಿಯೊಬ್ಬಳು ನಿನ್ನ  ಫೋನ್  ನಂಬರ್ ಕೊಡು ಎಂದಿದ್ದಾಳೆ. ತಬ್ಬಿಬ್ಬಾದ ಲಿಯು ನಂಬರ್ ಕೊಡಲು ನಿರಾಕರಿಸಿದ್ದಾನೆ. ಆಜರೂ ಯುವತಿ ಬಿಡದೇ ನಂಬರ್ ಕೊಡುವಂತೆ ಕಾಡಿದ್ದಾಳೆ. ಎಷ್ಟೇ ಪ್ರತ್ನಿಸಿದರೂ ಕೊಡಲೊಪ್ಪದ್ದಕ್ಕೆ ತೀವ್ರ ಸಿಟ್ಟಿಗೆದ್ದ ಮೂವರು ಆತನನ್ನು ಬಲವಂತವಾಗಿ ಎತ್ತಿಕೊಂಡು ವ್ಯಾನ್ ನೊಳಗೆ ತಳ್ಳಿದ್ದಾರೆ.  ಬಳಿಕ ಆತನ ಮೇಲೆ ಮುಗಿಬಿದ್ದು, ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ತೀವ್ರ ಕಂಗಲಾದ ಲಿಯು ಕೂಡಲೇ ತನ್ನ ಬಳಿ ಇದ್ದ ಮೊಬೈಲ್ ನಿಂದ ಪೊಲೀಸರಿಗೆ ಫೋನ್ ಮಾಡಿದ್ದಾನೆ.  ಅವರು ಬಂದು ಅವನನ್ನು ರಕ್ಷಣೆ ಮಾಡಿದ್ದಾರೆ. ಮೂವರು ಯುವತಿಯರು ಮಧ್ಯಪಾನ ಮಾಡಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT