ದೇಶ

ಸಹಜತೆಯತ್ತ ಮುಂಬೈ ಜನಜೀವನ, ರೈಲ್ವೆ ಸಂಚಾರ ಆರಂಭ

Sumana Upadhyaya

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿದ್ದ ಭಾರಿ ಮಳೆ ಇಂದು ಕಡಿಮೆಯಾಗಿದ್ದು, ಎಲ್ಲಾ 3 ಉಪನಗರಗಳಲ್ಲಿ  ರೈಲು ಸಂಚಾರ ಆರಂಭಗೊಂಡಿವೆ. ನಿಗದಿತ ಸಮಯಕ್ಕೆ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿಗದ್ದಾರೆ.

ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ರೈಲು ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಶುಕ್ರವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಮುಂಬೈ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ನಾಗರಿಕರು ಕೆಲಸಕ್ಕೆ ತೆರಳದೆ ಮನೆಯಲ್ಲಿ ಉಳಿದಿದ್ದರು. ಇಂದು ಕಚೇರಿಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು. ಆದರೆ ಶಾಲಾ, ಕಾಲೇಜುಗಳಿಗೆ ಇಂದೂ ಕೂಡ ಸರ್ಕಾರ ರಜೆ ಘೋಷಿಸಿದೆ. 

ಆದರೂ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಗರಿಕರು ಇಂದು ಮಧ್ಯಾಹ್ನದಿಂದ ರಾತ್ರಿವರೆಗೆ ಭಾರೀ ಮಳೆ ಬೀಳುವ ಸಾಧ್ಯತೆಯಿರುವುದರಿಂದ ಹೊರ ಹೋಗದೆ ಮನೆಯಲ್ಲಿರುವುದು ಉತ್ತಮ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಭಾರೀ ಮಳೆಗೆ ನಿನ್ನೆ ನಗರದಲ್ಲಿ ವಿದ್ಯುದಾಘಾತದಿಂದ ಇಬ್ಬರು ಬಲಿಯಾಗಿದ್ದಾರೆ.

SCROLL FOR NEXT