ಅಲ್ಮೊರಾ(ಉತ್ತರಖಂಡ್ ): ಉತ್ತರಖಂಡ್ ನ ಆಲ್ಮೊರಾ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ವೊಂದು ಕಣಿವೆಗೆ ಉರುಳಿದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, 20 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ದೆಹಲಿಯಿಂದ ಉತ್ತರಖಂಡ್ ಗೆ ಚಲಿಸುತ್ತಿದ್ದ ಬಸ್ ಅಲ್ಮೊರಾ ಬಳಿ ಕಣಿವೆಗೆ ಉರುಳಿದ್ದು, ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಗೋದಾವರಿ ನದಿಗೆ ಬಸ್ಸೊಂದು ಉರುಳಿ 22 ಮಂದಿ ದುರ್ಮರಣ ಹೊಂದಿದ್ದ ಹಿಂದೆಯೇ ಈ ಅವಘಡ ಸಂಭವಿಸಿದೆ.