ಭೋಪಾಲ್: ಉತ್ತರ ಪ್ರದೇಶದಲ್ಲಿ ಪತ್ರಕರ್ತನೊಬ್ಬನನ್ನು ಕಿಚ್ಚಿಟ್ಟು ಹತ್ಯೆಗೈದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇಂಥದ್ದೇ ಒಂದು ಘಟನೆ ಪುನರಾವರ್ತನೆಯಾಗಿದೆ.
ಪತ್ರಕರ್ತ ಸಂದೀಪ್ ಕೊತಾರಿ (44) ಜೂನ್ 14 ರಂದು ನಾಪತ್ತೆಯಾಗಿದ್ದನು. ನಾಪತ್ತೆಯಾಗಿರುವ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಶಂಕಿತ ಮೂವರು ಯುವಕರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.
ಇದೀಗ ಕೊತಾರಿ ಅವರನ್ನು ಕಿಚ್ಚಿಟ್ಟು ಹತ್ಯೆಗೈದ ನಂತರ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿರುವ ಕಾಡೊಂದರಲ್ಲಿ ಅಡಗಿಸಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.