ಪತ್ನಿಗೆ ಅರ್ಧಭಾಗ ಆಸ್ತಿ ನೀಡಿದ ವಸ್ತುಗಳ ಚಿತ್ರ 
ದೇಶ

ವಿಚ್ಛೇದಿತ ಪತ್ನಿಗೆ 'ಅರ್ಧ' ಪಾಲು ನೀಡಿದ ಪತಿರಾಯ!

ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ಅದು ಹೇಗೆಂದು ಹೇಳಿದರೆ ಎಂಥವರೂ ದಂಗಾಗುತ್ತಾರೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ...

ಬರ್ಲಿನ್: ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ಅದು ಹೇಗೆಂದು ಹೇಳಿದರೆ ಎಂಥವರೂ ದಂಗಾಗುತ್ತಾರೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ ಡೆರ್ ಜೂಲಿ ಯಾವುದೇ ತಕರಾರೆತ್ತದೇ ಒಪ್ಪಿಕೊಂಡಿದ್ದ. ಆದರೆ, ಆಸ್ತಿ ಹಂಚಿಕೆ ಮಾಡುವಾಗ ಮಾತ್ರ `ವಿಚ್ಛೇದನ' ಎಂಬ ಪದವನ್ನುಹೊಸ ಮಟ್ಟಕ್ಕೇರಿಸಿ ನೈಜ `ಛೇದನ'ಕ್ಕೆ ಕೈಹಾಕಿದ್ದಾನೆ.

ಅದು ಹೇಗೆ ಗೊತ್ತಾ? ತನ್ನಲ್ಲಿರುವ ಎಲ್ಲ ವಸ್ತುಗಳನ್ನೂ ಸರಿಯಾಗಿ ಅರ್ಧ ಕತ್ತರಿಸಿ, ಅದನ್ನು ಪತ್ನಿಗೆ ಕೊಟ್ಟಿದ್ದಾನೆ ಬರ್ಲಿನ್ ನಗರದ ನಿವಾಸಿ ಡೆರ್ ಜೂಲಿ ಎಂಬಾತನೇ ಈ ಮಹಾನುಭಾವನಾಗಿದ್ದು, ಟೆಡ್ಡಿ ಬೇರ್, ಸೋಫಾ, ಲ್ಯಾಪ್‍ಟಾಪ್, ಫೋನ್, ಕಾರು, ಸೈಕಲ್, ಐಫೋನ್, ಮಂಚ, ಹಾಸಿಗೆ, ಡಿವಿಡಿ ಪ್ಲೇಯರ್, ಕುರ್ಚಿಗಳು, ಲೆಟರ್‍ಬಾಕ್ಸ್, ಕಪಾಟು ಸೇರಿದಂತೆ ಎಲ್ಲ ವಸ್ತುಗಳನ್ನೂ ಅಕ್ಷರಶಃ ಎರಡಾಗಿ ಹೋಳು ಮಾಡಿದ್ದಾನೆ ಕೊಟ್ಟಿದ್ದಾನೆ ಈ ಪುಣ್ಯಾತ್ಮ.



ಅಷ್ಟೇ ಅಲ್ಲ, ಇವುಗಳನ್ನು ಕತ್ತರಿಸುವ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಜತೆಗೆ, 12 ವರ್ಷಗಳ ನಿನ್ನೊಂದಿಗಿನ ಸಂಸಾರ ನಿಜಕ್ಕೂ ಚಿರಸ್ಮರಣೀಯ. ನೀನು ನನ್ನ ಅರ್ಧಾಂಗಿ ಆದ್ದರಿಂದ ನನ್ನಲ್ಲಿರುವ ಅರ್ಧ ಆಸ್ತಿ ನಿನಗೆ ಸೇರತಕ್ಕದ್ದು ಎಂದು ಪತ್ನಿಗೆ ಸಂದೇಶ ರವಾನಿಸಿದ್ದಾರೆ.ಅಲ್ಲದೆ, ತನ್ನ ಪಾಲಿನ ಅರ್ಧರ್ಧ ವಸ್ತುಗಳನ್ನೆಲ್ಲ ಇಬೇಯಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಪಾಪ, ಪತಿಯಿಂದ `ಅರ್ಧ' ಆಸ್ತಿಯನ್ನು ಪಡೆದ ಪತ್ನಿಯ ಪಾಡೇನಾಯಿತು ಎಂಬುದು ಮಾತ್ರ ತಿಳಿದುಬಂದಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ