ಅಪಘಾತದಲ್ಲಿ ಮೃತಪಟ್ಟ ಮಹಿಳೆ 
ದೇಶ

ಪರರ ದೈವ ಪತಿ ಹಿಡಿಯಲು ಹೋಗಿ ಪರಲೋಕ ಸೇರಿದ ಪತ್ನಿ!

ಗಂಡ- ಹೆಂಡಿರ ಜಗಳ ರಸ್ತೆಗೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ! ಪರ ಸ್ತ್ರೀ ಸಂಗ ಮಾಡಲು ಹೋದ ಪತಿಯನ್ನು ಹಿಡಿಯಲು ಹೋಗಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ...

ಹೂಸ್ಟನ್: ಗಂಡ- ಹೆಂಡಿರ ಜಗಳ ರಸ್ತೆಗೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ! ಪರ ಸ್ತ್ರೀ ಸಂಗ ಮಾಡಲು ಹೋದ ಪತಿಯನ್ನು ಹಿಡಿಯಲು ಹೋಗಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಪತಿಯೇ ಪರ ದೈವ ಅಂದು-ಕೊಂಡರೆ ಆತ ಪರರ ದೈವ ಆಗುತ್ತಿದ್ದಾನೆ. ಬೇರೊಬ್ಬ ಹೆಂಗಸಿನ ಜತೆಗೆ ಓಡಾಡುತ್ತಿದ್ದಾನೆ. ಗಂಡನ ಮೋಸದಾಟವನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯಬೇಕೆಂಬ ಪ್ರಯತ್ನದಲ್ಲಿ ರೇಸಿಗೆ ಬಿದ್ದು ಎನ್‍ಯುವಿ ಓಡಿಸಿದ ಟೆಕ್ಸಾಸ್‍ನ ನ್ಯಾನ್ಸಿ ಎಕೋಸ್ಟಾ ಎಂಬಾಕೆ ಈಗ ಇಹಲೋಕ ತ್ಯಜಿಸಿದ್ದಾಳೆ. ಟೆಕ್ಸಾಸ್‍ನ ಈ ಮೂರು ಮಕ್ಕಳ ತಾಯಿಗೆ ತನ್ನ ಪತಿ
ಬೇರೊಬ್ಬಳ ಜತೆಗೆ ಲಲ್ಲೆಗರೆಯುತ್ತಿದ್ದಾನೆ, ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಅನುಮಾನ ವಿತ್ತು.

ಮನೆಯಲ್ಲಿ ನಡೆಯುತ್ತಿದ್ದ ಜಗಳ, ತಿರಸ್ಕಾರದಿಂದಾಗಿ ಅನುಮಾನಗೊಂಡ ಆಕೆ ಪತಿಯ ಹಿಂದೆ ಬೇಹುಗಾರರನ್ನೂ ಬಿಟ್ಟಿದ್ದಳು. ಗುರುವಾರ ಗಂಡ ಬೇರೊಬ್ಬ ಹೆಂಗಸಿನ ಜತೆಗೆ ಕಾರಲ್ಲಿ ಹೋಗುತ್ತಿರುವ ಮಾಹಿತಿ ಬಂದ ತಕ್ಷಣ ತನ್ನ ಎಸ್‍ಯುವಿ ಏರಿ ಫಾಲೋ ಮಾಡಿದ್ದಾಳೆ. ಗಂಡನಿರುವ ಕಾರನ್ನು ಅಡ್ಡಹಾಕ ಬೇಕು, ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಎರಡು ತದಕಬೇಕು ಎಂದು ಅಂದು ಕೊಂಡಿದ್ದಳೋ ಏನೋ? ಈ ಬರದಲ್ಲಿ ರೇಸಿಗೆ ಬಿದ್ದಿದ್ದಾಳೆ.

ಈ ವೇಳೆ ಟ್ರಾಫಿಕ್ ಮಧ್ಯೆ ಆಕೆಯಿದ್ದ ಎಸ್‍ಯುವಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು, ಮೂರು ಪಲ್ಟಿಯಾದ ಎಸ್‍ಯುವಿ ಸಂಪೂರ್ಣ ನಜ್ಜುಗುಜ್ಜಾದ ಹಿನ್ನೆಲೆಯಲ್ಲಿ ಅದರಲ್ಲಿದ್ದ ನ್ಯಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಇನ್ನು ಎಸ್‍ಯುವಿ ಡಿಕ್ಕಿ ಹೊಡೆದ ಕಾರಿನ ಚಾಲಕನೂ ಗಂಭೀರ ಗಾಯಗೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT