ಸಾಂದರ್ಭಿಕ ಚಿತ್ರ 
ದೇಶ

ಹಿರಿಯ ನಾಗರಿಕರಿಗೆ ರೈಲಲ್ಲಿ ಬರ್ತ್ ಹತ್ತಲು ಮೆಟ್ಟಿಲು

ರೈಲ್ವೆ ಕೋಚ್‍ನಲ್ಲಿ ಮೇಲಂತಸ್ತಿನ ಬರ್ತ್ ಸಿಕ್ಕಿದ್ದಲ್ಲಿ ಹೇಗಪ್ಪ ಹತ್ತುವುದು ಎಂದು ಯಾರೂ ಸಹ ತಳಮಳಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ...

ನವದೆಹಲಿ: ರೈಲ್ವೆ ಕೋಚ್‍ನಲ್ಲಿ ಮೇಲಂತಸ್ತಿನ ಬರ್ತ್ ಸಿಕ್ಕಿದ್ದಲ್ಲಿ ಹೇಗಪ್ಪ ಹತ್ತುವುದು ಎಂದು
ಯಾರೂ ಸಹ ತಳಮಳಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ ರೈಲ್ವೆ ಮಹಿಳೆಯರು, ವೃದಟಛಿರು ಮೇಲಂತಸ್ತಿನ ಬರ್ತ್‍ಗೆ ಹತ್ತಿಳಿಯಲು ಅನುಕೂಲವಾಗಲೆಂದು ಮೆಟ್ಟಿಲು ವ್ಯವಸ್ಥೆ ಮಾಡುವ ಚಿಂತನೆ ನಡೆಸಿದೆ. ಈ ಬಗ್ಗೆ ಸೋಮವಾರ `ಇಂಡಿಯನ್ ಎಕ್ಸ್‍ಪ್ರೆಸ್' ವರದಿ ಮಾಡಿದೆ.

ಲಿಂಕ್ ಹಾಫ್ಮನ್ ಬುಷ್ (ಎಲ್‍ಎಚ್‍ಬಿ) ಕೋಚ್ ಗಳನ್ನು ತಯಾರಿಸುವ ಕಪೂರ್ತಲ ಮತ್ತು ಚೆನ್ನೈ ಘಟಕಗಳ ಎಂಜಿನಿಯರ್‍ಗಳು ಸಾಧ್ಯವಿರುವ ಮಾದರಿಗಳನ್ನು ರೂಪಿಸಿದ್ದಾರೆ. ಶಾಶ್ವತವಾಗಿರುವ ಮತ್ತು ಅನುಕೂಲಕರವಾದ ಒಂದು ಮಾದರಿಯನ್ನು ಅಂತಿಮಗೊಳಿಸಲಾಗುವುದು. ರೈಲ್ವೆಯಲ್ಲಿ ಸಿಗುತ್ತಿರುವ ಸೇವೆಗಳ ಕುರಿತು ಕೆಲವು ತಿಂಗಳ ಹಿಂದೆ ಪ್ರಯಾಣಿಕರಿಂದ ಹಿಂಮಾಹಿತಿ ಪಡೆಯಲಾಗಿತ್ತು. ಆಗ ಪ್ರಯಾಣಿಕರು ಮುಂದಿಟ್ಟ ಬೇಡಿಕೆಗಳ ಭಾಗವಾಗಿ ಈ ಏಣಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಹಲವು ಮಾದರಿಗಳ ಕುರಿತು ಪ್ರಯತ್ನಗಳನ್ನು ನಡೆಸಲಾಗಿದೆ. ಪ್ರಥಮ ದರ್ಜೆ ಎಸಿ ಕೋಚ್‍ಗೆ ಅಳವಡಿಸಬಹುದಾದ ಮಾದರಿ ಅಂತಿಮ ಗೊಳಿಸಲಾಗಿದೆ. 2 ಮತ್ತು 3ನೇ ದರ್ಜೆ ಎಸಿಗೆ ಅಳವಡಿಸಬಹುದಾದ ಮಾದರಿಯ ಅಂತಿಮ ಪ್ರಕ್ರಿಯೆ ನಡೆದಿದೆ ಎಂದು ರೈಲ್ವೆ ಮಂಡಳಿ ಸದಸ್ಯರಾದ ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಉತ್ತಮವಾದ ಮಾದರಿಗಳಿದ್ದಲ್ಲಿ ಪಡೆಯುವುದಕ್ಕಾಗಿ ಅಹಮದಾಬಾದ್‍ನ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಡಿಸೈನ್ ನೆರವು ಕೋರಿರುವುದಾಗಿ ಅವರು ಹೇಳಿದ್ದಾರೆ. ಸದ್ಯ 3 ಮೆಟ್ಟಿಲು ಹೊಂದಿರುವ ಕಬ್ಬಿಣದ ಫ್ರೇಮನ್ನು ಕೋಚ್‍ನ ಒಂದು ಬದಿಯಲ್ಲಿ ಜೋಡಿಸಲಾಗುವುದು. ಈ ಮಾದರಿಯಲ್ಲಿ ಅಭ್ಯಾಸ ಇರುವವರು ಸುಲಭವಾಗಿ ಏರಿಳಿಯುತ್ತಾರೆ.

ಇಲ್ಲದವರು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ರೀತಿಯ ಮೆಟ್ಟಿಲು ಅಳವಡಿಸಲು ಪ್ರತಿ ಕೋಚ್‍ಗೆ ರು.20 ಸಾವಿರ ವೆಚ್ಚವಾಗಲಿದೆ. ಹಲವು ಪ್ರಥಮ ದರ್ಜೆ ಎಸಿ ಕೋಚ್‍ಗಳಿಗೆ ಈಗಾಗಲೆ ಈ ಮಾದರಿಯ ಮೆಟ್ಟಿಲು ಅಳವಡಿಸಲಾಗಿದ್ದು ಹಿಂಮಾಹಿತಿ ಪಡೆಯಲಾಗುತ್ತಿದೆ. ಮೂರು ಮೆಟ್ಟಿಲು ಹೊಂದಿರುವ ಈ ಮಾದರಿಯಲ್ಲಿ ಮೂರನೆಯದು ಅತಿದೊಡ್ಡ ಮೆಟ್ಟಿಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!