ಕೊಲ್ಕತ್ತಾ: ನೊಬಲ್ ಪ್ರಶಸ್ತಿ ಪುರಸ್ಕೃತೆ ದಿವಂಗತ ಮದರ್ ತೆರೇಸಾ ಅವರ ಉತ್ತರಾಧಿಕಾರಿ ಸೋದರಿ ಸಿಸ್ಟರ್ ನಿರ್ಮಲ ಜೋಶಿ ಅವರು ನಿಧನರಾಗಿದ್ದಾರೆ.
81 ವರ್ಷದ ನಿರ್ಮಲ ಜೋಶಿ ಅವರು ಮದರ್ ತೆರೆಸಾ ಅವರು ಸ್ಥಾಪಿಸಿದ್ದ ಮಿಶನರೀಸ್ ಆಪ್ ಚ್ಯಾರಿಟಿಯನ್ನು ನಡೆಸುತ್ತಿದ್ದರು. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿರುವುದಾಗಿ ಚಾರಿಟಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಮೃತ ದೇಹವನ್ನು ನಾಳೆ ಬೆಳಗ್ಗೆ ಮದರ್ ಹೌಸ್ ಗೆ ತರಲಾಗುವುದು. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಸುವುದಾಗಿ ಚಾರಿಟಿಯ ಅಧಿಕಾರಿಗಳು ತಿಳಿಸಿದ್ದು, ಗೌರವಾರ್ಪಣೆ ಸಲ್ಲಿಸುವರ ನಾಳೆ ಮದರ್ ಹೌಸ್ ಗೆ ಬರಬಹುದೆಂದು ತಿಳಿಸಿದ್ದಾರೆ.
ಮದರ್ ತೆರೇಸಾ ಅವರ ನಿಧನಕ್ಕೆ ಆರು ತಿಂಗಳ ಹಿಂದೆ, ಮಾರ್ಚ್ 13, 1997ರಂದು ಸಿಸ್ಟರ್ ನಿರ್ಮಲಾ ಅವರನ್ನು ಮಿಶನರೀಸ್ ಆಫ್ ಚಾರಿಟಿಯ ಸುಪಿರೀಯರ್ ಜನರಲ್ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. 2009ರ ಎಪ್ರಿಲ್‌ನಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಜನರಲ್ ಚ್ಯಾಪ್ಟರ್ ಸಭೆಯಲ್ಲಿ ಸಿಸ್ಟರ್ ಮೇರಿ ಪ್ರೇಮಾ ಅವರನ್ನು ಸಿಸ್ಟರ್ ನಿರ್ಮಲಾ ಅವರ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.