ಮುಂಬೈ: ಮಹಾರಾಷ್ಟ್ರದ ಶಿಕ್ಷಣ ಸಚಿವ ವಿನೋದ್ ತಾವಡೆ ತಮ್ಮ ಎಂಜಿನಿಯರಿಂಗ್ ಪದವಿ ನಕಲಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
1984ರಲ್ಲಿ ಪುಣೆಯ ದ್ಯಾನೇಶ್ವರ ವಿದ್ಯಾಪೀಠದಿಂದ ಪದವಿ ಪಡೆದುಕೊಂಡಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪದವಿ ಬಗ್ಗೆ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾದ ಅಂಶ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಇದರ ಜತೆಗೆ ತಾನು ಪದವೀಧರ ಕ್ಷೇತ್ರದ ಮತದಾರ ಎಂಬುದಾಗಿ ಹೆಸರೂ ನೊಂದಾಯಿಸಿಕೊಂಡಿಲ್ಲ ಎಂದೂ ತಾವಡೆ ಸ್ಪಷ್ಟನೆ ನೀಡಿದ್ದಾರೆ.