ನವದೆಹಲಿ: ಮಹಾತ್ಮ ಗಾಂಧಿ, ಪ್ರವಾದಿ ಮಹಮದ್ ಹಾಗೂ ಯೇಸು ಕ್ರಿಸ್ತನಂತಹ ದೇವ ಮಾನವರೂ ಹಾಗೂ ಸಮಾಜ ಸುಧಾಕಕರ ವಿರುದ್ಧವೂ ಕೂಡ ಆರೋಪಗಳು ಕೇಳಿ ಬಂದಿದ್ದವು ಎಂದು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜು ಪ್ರಾಂಶುಪಾಲ ವಲ್ಸನ್ ಥಾಂಪು ಹೇಳಿದ್ದಾರೆ.
ಸೇಂಟ್ ಸ್ಟೀಫನ್ ಕಾಲೇಜು ಸಹ ಪ್ರಾದ್ಯಾಪಕ ಸತೀಶ್ ಕುಮಾರ್ ವಿರುದ್ದ ದಾಖಲಾಗಿರುವ ಪಿಎಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪ್ರತಿಕ್ರಯಿಸಿದ ಅವರು, ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ, ಆರೋಪಿ ಅತಿ ಹೆಚ್ಚು ಪ್ರಮಾಣದ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.
ಇನ್ನು ಈ ಪ್ರಕರಣದಲ್ಲಿ ತಾವು ಯಾರನ್ನೂ ರಕ್ಷಿಸುತ್ತಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಇನ್ನು ಲೈಂಗಿಕ ಕಿರುಕುಳ ನಡೆದಿದೆ, ಇಲ್ಲ ಎಂಬುದನ್ನು ನಿರ್ಧರಿಸಲು ನಾನು ಯಾರು ಎಂದು ಪ್ರಶ್ನಿಸಿದ ಅವರುಸ ಅದಕ್ಕಾಗಿ ತನಿಖಾ ತಂಡ ನೇಮಕವಾಗಿದೆ ಎಂದರು.
ಲೈಂಗಿಕ ಕಿರುಕುಳ ಆರೋಪದಡಿ ಪ್ರೊ. ಸತೀಶ್ ಕುಮಾರ್ ವಿರುದ್ಧ ದೂರು ದಾಖಲಾಗಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಸತೀಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.