ನವದೆಹಲಿ: ಸ್ಮಾರ್ಟ್ ಸಿಟಿ, ಅಮೃತ್‍ಗಳ ಚಾಲನೆಗೆ ಜೂ.25ಕ್ಕೆ ಮುಹೂರ್ತ ನಿಗದಿಯಾಗಿದ್ದು, ಕರ್ನಾಟಕದಲ್ಲಿ 6 ಸ್ಮಾರ್ಟ್ ಸಿಟಿಗಳನ್ನು ಹೆಸರಿಸಲು ಹಾಗೂ 21 ನಗರಗಳನ್ನು ಅಮೃತ್ ಯೋಜನೆಯಡಿ ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿದೆ.
ಉತ್ತರ ಪ್ರದೇಶಕ್ಕೆ ಗರಿಷ್ಠ ಸಂಖ್ಯೆಯ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದರೆ ತಮಿಳುನಾಡು, ಮಹಾರಾಷ್ಟ್ರಕ್ಕೆ ನಂತರದ ಸ್ಥಾನ ಲಭಿಸಿದೆ. ದೆಹಲಿಯಲ್ಲಿ ಕೇವಲ ಒಂದು ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಅವಕಾಶವಿದೆ.
ಉತ್ತರಪ್ರದೇಶದಲ್ಲಿ 13 ಸ್ಮಾರ್ಟ್ ಸಿಟಿ, 54 ಅಮೃತ್ ಸಿಟಿಗಳು ಬರಲಿದೆ. ಪ್ರಧಾನಿ ಮೋದಿ ಜೂ25ಕ್ಕೆ 100 ಸ್ಮಾರ್ಟ್ ಸಿಟಿ, 500 ಅಮೃತ್ ಸಿಟಿ ಹಾಗೂ ಪ್ರಧಾನಮಂತ್ರಿ ಆವಾಸ ಯೋಜನೆಗೆ ಚಾಲನೆ ನೀಡಲಿದ್ದಾರೆ.