ದೇಶ

ಮುಳ್ಳುಹಂದಿಯನ್ನು ನುಂಗಿ, ಅರಗಿಸಿಕೊಳ್ಳಲಾಗದೆ ಹೆಬ್ಬಾವು ಸಾವು!

Rashmi Kasaragodu

ಜೊಹಾನ್ಸ್‌ಬರ್ಗ್‌: ಮುಳ್ಳು ಹಂದಿಯನ್ನು ನುಂಗಿ ಅರಗಿಸಿಕೊಳ್ಳಲು ಸಾಧ್ಯವಾಗದೆ 13 ಅಡಿ ಉದ್ದ ಹೆಬ್ಬಾವು ಸತ್ತ ಘಟನೆ ಜೊಹಾನ್ಸ್‌ಬರ್ಗ್‌ ನಲ್ಲಿ ನಡೆದಿದೆ.

 ದಕ್ಷಿಣ ಆಫ್ರಿಕದ ಪೋರ್ಟ್‌ ಶೆಪ್‌ಸ್ಟೋನ್‌ ಸಮೀಪದ ಲೇಕ್‌ ಎಲಾಂಡ್‌ ಗೇಮ್‌ ರಿಸರ್ವ್‌ ಎಂಬಲ್ಲಿ ಹದಿಮೂರು ಅಡಿ ಉದ್ದದ ಹೆಬ್ಬಾವು ರಸ್ತೆ ಬದಿಯಲ್ಲಿ ಹೊಟ್ಟೆ ಉಬ್ಬಿಕೊಂಡ ಸ್ಥಿತಿಯಲ್ಲಿ ಸತ್ತು ಬಿದ್ದಿತ್ತು.

ಯಾವುದೋ ಪ್ರಾಣಿಯನ್ನು ತಿಂದು ಅರಗಿಸಿಕೊಳ್ಳಲಾರದೆ ಹೆಬ್ಬಾವು ಸತ್ತಿರುವುದನ್ನು ಜನರು ಸಹಜವಾಗಿಯೇ ಶಂಕಿಸಿದರು.ಆಮೇಲೆ ಹೆಬ್ಟಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ ಅದರೊಳಗೆ ಸತ್ತಿರುವ, ಭಾರೀ ದೊಡ್ಡ ಗಾತ್ರದ ಮುಳ್ಳು ಹಂದಿ ಕಂಡು ಬಂತು. ಮುಳ್ಳು ಹಂದಿಯ ಹರಿತವಾದ ಡಜನ್‌ಗಟ್ಟಲೆ ಮುಳ್ಳುಗಳು ಹೆಬ್ಬಾವಿನ ಹೊಟ್ಟೆ ಒಳಭಾಗದಲ್ಲಿ ನಾಟಿಕೊಂಡದ್ದು ಇದು ಹೆಬ್ಬಾವಿನ ಸಾವಿಗೆ ಕಾರಣವಾಗಿತ್ತು.

ಹೆಬ್ಬಾವಿನ ಸಾವಿನ ನಿಖರ ಕಾರಣ ನಮಗೆ ಗೊತ್ತಾಗಿಲ್ಲ. ಅದು ನುಂಗಿರುವ ಮುಳ್ಳುಹಂದಿಯ ಡಜನ್‌ಗಟ್ಟಲೆ ಮುಳ್ಳುಗಳು  ಜೀರ್ಣಾಂಗದಲ್ಲಿ ಬಾಣಗಳಂತೆ ಚುಚ್ಚಿಕೊಂಡಿರುವುದು ಕಂಡು ಬರುತ್ತದೆ. ಹೆಬ್ಬಾವು ಪ್ರಾಣ ಉಳಿಸಿಕೊಳ್ಳುವ ಸಂಕಟದಲ್ಲಿ ಕಲ್ಲು ಬಂಡೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಅದರ ಹೊಟ್ಟೆಯೊಳಗಿನ ಹರಿತವಾದ ಮುಳ್ಳುಗಳು ಇನ್ನಷ್ಟು ಆಳಕ್ಕೆ ನಾಟಿಕೊಂಡಿರಬೇಕು. ಹಾಗಾಗಿ ಹೆಬ್ಬಾವು ಸತ್ತಿರಬಹುದು ಎಂದು ಲೇಕ್‌ ಎಲಾಂಡ್‌ ಗೇಮ್‌ ರಿಸರ್ವ್‌ನ ಜನರಲ್‌ ಮ್ಯಾನೇಜರ್  ಜೆನ್ನಿಫ‌ರ್ ಫ‌ುಲ್ಲರ್  ಹೇಳಿದ್ದಾರೆ.
 

SCROLL FOR NEXT