ಸಾಂದರ್ಭಿಕ ಚಿತ್ರ 
ದೇಶ

ಪವಾಡಸದೃಶ್ಯವಾಗಿ ಬದುಕಿದ ತಾಯಿ-ಮಗು

ವಿಮಾನ ಅಪಘಾತಕ್ಕೀಡಾಗಿ 5 ದಿನಗಳ ನಂತರವೂ ವಾಯವ್ಯ ಕೊಲಂಬಿಯಾದ ದಟ್ಟ ಅರಣ್ಯದಲ್ಲಿ ತಾಯಿ-ಮಗು ಬದುಕುಳಿದಿರುವ ಘಟನೆ ನಡೆದಿದೆ...

ಕೊಲಂಬಿಯಾ: ಕೇಳಿದರೆ ಇದು ಆಶ್ಚರ್ಯವೆನಿಸುತ್ತದೆ, ಆದರೂ ನಿಜ. ವಿಮಾನ ಅಪಘಾತಕ್ಕೀಡಾಗಿ 5 ದಿನಗಳ ನಂತರವೂ ವಾಯವ್ಯ ಕೊಲಂಬಿಯಾದ ದಟ್ಟ ಅರಣ್ಯದಲ್ಲಿ  ತಾಯಿ-ಮಗು ಬದುಕುಳಿದಿರುವ ಘಟನೆ ನಡೆದಿದೆ.

ಹದಿನೆಂಟು ವರ್ಷದ ನೆಲ್ಲಿ ಮುರಿಲ್ಲೋ ಮತ್ತು ಆಕೆಯ ಒಂದೂವರೆ ವರ್ಷದ ಮಗ ಪ್ರಯಾಣಿಸುತ್ತಿದ್ದ ಸೆಸ್ನಾ  ವಿಮಾನ ಕಳೆದ ವಾರ ಕೊಲಂಬಿಯಾದ ಚೋಕೋ ಪ್ರಾಂತ್ಯದಲ್ಲಿ ಉರುಳಿ ಬಿದ್ದಿತ್ತು. ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಅದೊಂದು ದಟ್ಟ ಅರಣ್ಯವಾಗಿದ್ದು, ಅಪಘಾತ ದುರಂತಮಯ. ತಾಯಿ-ಮಗ ಬದುಕುಳಿದಿರುವುದು ಪವಾಡ ಎಂದು ಕೊಲಂಬಿಯಾ ವಿಮಾನ ಸಂಸ್ಥೆಯ ಇನ್ನೊಬ್ಬ ಚಾಲಕ ಕರ್ನಲ್ ಹೆಕ್ಟರ್ ಕರ್ರಸ್ಕಲ್ ತಿಳಿಸಿದ್ದಾರೆ.

ತಾಯಿ ಮುರಿಲ್ಲೋಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಮಗುವಿಗೆ ಯಾವುದೇ ಹಾನಿಯುಂಟಾಗಿಲ್ಲ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!