ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಎಸ್‍ಎ) ಫ್ರಾನ್ಸ್ ಅಧ್ಯಕ್ಷರಾದ ಜಾಕ್ ಚಿರಾಕ್, ನಿಕೋಲಸ್ ಸರ್ಕೋಝಿ ಮತ್ತು ಹಾಲಿ ಅಧ್ಯಕ್ಷ ಕೋಯಿಸ್ ಹೊಲಾಂಡೆ ಅವರ ವಿರುದ್ಧವೂ ಬೇಹುಗಾರಿಕೆ ನಡೆಸಿದೆ ಎನ್ನುವ ಆಘಾತಕಾರಿ ಮಾಹಿತಿ ವಿಕಿಲೀಕ್ಸ್ ಬಹಿರಂಗಪಡಿಸಿದೆ.
ರಹಸ್ಯ ಗುಪ್ತಚರ ವರದಿ ಹಾಗೂ ತಾಂತ್ರಿಕ ದಾಖಲೆಗಳನ್ನು ಆಧರಿಸಿ ವಿಕಿಲೀಕ್ಸ್ ಈ ವಿಚಾರ ಬಹಿರಂಗ ಡಿಸಿದೆ. ಈ ಬೆಳವಣಿಗೆಯಿಂದ ಫ್ರಾನ್ಸ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಿತ್ರ ರಾಷ್ಟ್ರದ ಮೇಲೆಯೇ ಅಮೆರಿಕ ಹೇಗೆ ಬೇಹುಗಾರಿಕೆ ನಡೆಸಿತು ಎಂಬ ಬಗ್ಗೆ ವಿವರಣೆ ನೀಡಬೇಕು ಅಲ್ಲಿನ ರಾಜಕಾರಣಿಗಳು ಆಗ್ರಹಿಸಿದ್ದಾರೆ.