ಚೆನ್ನೈ: ಅತ್ಯಾಚಾರಿಯೊಬ್ಬನಿಗೆ ಮಧ್ಯಂತರ ಜಾಮೀನು ನೀಡಿ ಸಂತ್ರಸ್ತೆಯೊಂದಿಗೆ ಸಂಧಾನಕ್ಕೆ ಮದ್ರಾಸ್ ಹೈಕೋರ್ಟ್ ಅವಕಾಶ ಕಲ್ಪಿಸಿದ ಬೆನ್ನಲ್ಲೇ ಸಂತ್ರಸ್ತೆಯು, ``ನಾನು
ಅತ್ಯಾಚಾರಿಯನ್ನು ಮದುವೆಯಾಗುವುದಿಲ್ಲ'' ಎಂದು ಖಡಾಖಂಡಿತವಾಗಿ ತಿಳಿಸಿದ್ದಾಳೆ.
ಖಾಸಗಿ ಮಾಧ್ಯಮದ ಜತೆ ಮಾತನಾಡಿರುವ ಅತ್ಯಾಚಾರ ಸಂತ್ರಸ್ತೆ, ``ನಾನು ಆತನೊಂದಿಗೆ ಮಾತನಾಡಲೂ ಇಚ್ಛಿಸುವುದಿಲ್ಲ, ಮದುವೆಗೂ ಸಿದ್ಧಳಿಲ್ಲ. ಇಷ್ಟು ವರ್ಷಗಳ ಹೋರಾಟದ ಬಳಿಕ ಪ್ರಕರಣವನ್ನು ಸಂಧಾನದಲ್ಲಿ ಮುಗಿಸಲು ಕೋರ್ಟ್ ಬಯಸಿದ್ದಾದರೂ ಏಕೆ'' ಎಂದು ಪ್ರಶ್ನಿಸಿದ್ದಾಳೆ. ತಮಿಳುನಾಡಿನ ವಿ.ಮೋಹನ್ ಎಂಬಾತ ಈಕೆಯ ಮೇಲೆ ಅತ್ಯಾಚಾರವೆಸಗಿದ್ದ. ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣ ಸಂಬಂಧ ತೀರ್ಪು ನೀಡಿದ್ದ ಕಡಲೂರು ಮಹಿಳಾ ಕೋರ್ಟ್, ಅಪರಾಧಿಗೆ ರು.2ಲಕ್ಷ ದಂಡ, 7 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆತ