ಕೆಎಫ್ ಸಿ ಆಹಾರ 
ದೇಶ

ಕೆಎಫ್ ಸಿ ಆಹಾರದಲ್ಲಿ ಮಾರಕ ರೋಗಾಣು ಪತ್ತೆ

ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ...

ಹೈದರಾಬಾದ್: ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ. ಹೈದರಾಬಾದ್ ನ ಕೆಂಟಕಿ ಫ್ರೈಡ್ ಚಿಕನ್ ಸೆಂಟರ್ ಒಂದರಲ್ಲಿ ಆಹಾರದ  ಸ್ಯಾಂಪಲ್ ನ ಪರೀಕ್ಷೆ ನಡೆಸಿದಾಗ ಈ ರೋಗಾಣಗಳು ಪತ್ತೆಯಾಗಿವೆ. ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಕೆಎಫ್ ಸಿ ಯಲ್ಲಿ ಕೆಲ ಖಾದ್ಯಗಳಲ್ಲಿ ಮಾರಕ ರೋಗಾಣುಗಳಾದ ಸಾಲ್ಮೋನೆಲ್ಲಾ ಹಾಗೂ ಇ ಕೊಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಈ ಎರಡು ಬ್ಯಾಕ್ಟೀರಿಯಾಗಳು  ಮಾರಕವಾಗಿದ್ದು, ಮಾನವ ದೇಹ ಸೇರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೈದರಾ ಬಾದ್ ನ ಆಹಾರ ತಜ್ಞೆ ಎವಿ ಕೃಷ್ಣ ಕುಮಾರಿ ತಿಳಿಸಿದ್ದಾರೆ.

ಏನಿವು ರೋಗಾಣುಗಳು:

ಸಾಲ್ಮೋನೆಲ್ಲಾ ಒಂದು ರೋಗ ಹರಡುವ ಬ್ಯಾಕ್ಟೀರಿಯಾ. ಇದರಿಂದ ಗ್ಯಾಸ್ಟ್ರಿಕ್, ಟೈಪಾಯಿಡ್ ಜ್ವರ ಹರಡಲು ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಬೇಯಿಸದ ಮಾಂಸ, ಸೀಫುಡ್ ಬೇಯಿಸದ ಮೊಟ್ಟೆ ಹಾಗೂ ತೊಳೆಯದ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುತ್ತದೆ.

ಇ ಕೊಲಿ: ಇದೊಂದು ಮಾರಕ ಬ್ಯಾಕ್ಟೀರಿಯಾ ಆಗಿದೆ. ಇದು ಡಯೇರಿಯಾ, ಅನಿಮಿಯಾ ರೋಗಗಳಿಗೆ ಹರಡುವುದಲ್ಲೇ ಕಿಡ್ನಿ ಫೇಲ್ಯೂರ್ ಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಇರುವ ಆಹಾರ ಪದಾರ್ಥಗಳನ್ನು 160 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬೇಕು. ಇಲ್ಲದಿದ್ದರೇ ಈ ಬ್ಯಾಕ್ಟೀರಿಯಾ ಸಾಯದೇ ಬದುಕುಳಿದು ರೋಗ ಹರಡುತ್ತದೆ.

ಇದು ಹೆಚ್ಚಾಗಿ ಹಾಲಿನ ಉತ್ಪನ್ನಗಳು, ಹಸಿ ತರಕಾರಿಗಳು ಹಾಗೂ ಫ್ಯಾಶ್ಚರೀಕರಿಸದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  ಹೀಗಾಗಿ ಕೆಎಫ್ ಸಿ ಆಹಾರ ಪದಾರ್ಥಗಳಿಗೆ ನಿಷೇಧ ಹೇರಬೇಕೆಂದು ಹೈದರಾಬಾದ್ ನ ಎನ್ ಜಿ ಒ  ಒತ್ತಾಯಿಸಿದೆ.
ಆದರೆ ಕೆಎಫ್ ಸಿ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಉತ್ತಮ ಗುಣಮಟ್ಟದ  ಹೈಜೆನಿಕ್ ಆಹಾರ  ನೀಡುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT