ದೇಶ

ಆಕ್ಸ್ ಫರ್ಡ್ ನಿಘಂಟಿನಲ್ಲಿ ಭೇಲ್‍ಪುರಿ!

Srinivasamurthy VN

ಕೋಲ್ಕತ: ಜಗತ್ತಿನ ನಂಬರ್‍ಒನ್ ನಿಘಂಟು ಎಂದೇ ಖ್ಯಾತವಾಗಿರುವ ಆಕ್ಸ್ ಫರ್ಡ್  ಡಿಕ್ಷನರಿ, ಒಂದೊಂದೇ ಭಾರತೀಯ ಪದಗಳನ್ನು ತನ್ನ ಪದ ಕೋಶಕ್ಕೆ ಸೇರಿಸಿಕೊಳ್ಳುತ್ತಿದೆ.

ಈಗಾಗಲೇ ದಿನಬಳಕೆಯಲ್ಲಿರುವ ಹಲವು ಭಾರತೀಯ ಪದಗಳಿಗೆ, ಪಡೆನುಡಿಗಳಿಗೆ ತನ್ನೊಳಗೆ ಸ್ಥಾನ ಕೊಟ್ಟಿರುವ ಆಕ್ಸ್ ಫರ್ಡ್ ಇದೀಗ ಭೇಲ್ ಪುರಿ, ಚೂಡಿದಾರ್, ಢಾಬಾ ಮತ್ತು ಅರ್ರೆ ಯಾರ್ ಪದಗಳನ್ನೂ ನಿಘಂಟಿಗೆ ಸೇರಿಸಿಕೊಂಡು ಅದಕ್ಕೆ ಅರ್ಥವಿವರಣೆ ನೀಡಿದೆ. ವಿಶೇಷವೆಂದರೆ ಚೂಡಿದಾರ್ ಮತ್ತು ಅರ್ರೆ ಯಾರ್ ಪದಗಳು ನಿಘಂಟಿಗೆ ಈಗ ಸೇರ್ಪಡೆಯಾಗುತ್ತಿದೆಯಾದರೂ, ಅವು ಇಂಗ್ಲಿಷ್ ಭಾಷೆಯವರಿಗೆ ಅಪರಿ ಚಿತವೇನಲ್ಲ. 1880ರಲ್ಲಿ `ಚೂಡಿದಾರ್' ಪದ ಇಂಗ್ಲೀಷಿನವರಲ್ಲಿ ಬಳಕೆಯಾಗಿತ್ತು. ಇದೀಗ ಅಧಿಕೃತವಾಗಿ ಡಿಕ್ಷನರಿ ಸೇರಿದೆ.

ಅಂತೆಯೇ `ಅರ್ರೆ ಯಾರ್' ಪದ ಕೂಡ ಸುಮಾರು 180 ವರ್ಷಗಳ ಹಿಂದೆಯೇ ಇಂಗ್ಲಿಷರಲ್ಲಿ ಜನಜನಿತವಾಗಿತ್ತು ಎನ್ನಲಾಗಿದೆ. ಆಕ್ಸ್ ಫರ್ಡ್ ನಿಘಂಟಿನಲ್ಲಿ ನೀಡಿರುವ ಅರ್ಥ ವಿಶೇಷ ಹೀಗಿದೆ:-
ಚೂಡಿದಾರ್: ದಕ್ಷಿಣ ಏಷಿಯಾದ ಜನರಿಂದ ಸಾಂಪ್ರದಾಯಿಕವಾಗಿ ಬಳಸಲ್ಪಡುವ ಪಾದದ ಬಳಿ ಹೆಚ್ಚಿನ ಬಟ್ಟೆಯಿರುವ ಬಿಗಿಯಾದ ಪೈಜಾಮ
ಢಾಬಾ: (ನಾಮಪದ) ರಸ್ತೆ ಬದಿಯ ಆಹಾರ ಕೇಂದ್ರ
ಅರ್ರೆ ಯಾರ್ : ಗೆಳೆಯರನ್ನು ಅಥವಾ ಆಪ್ತರನ್ನು ಸಂಬೋಧಿಸಲು ಬಳಸುವ ಪದ

SCROLL FOR NEXT