ನವದೆಹಲಿ: ದೇಶದ ಪ್ರಮುಖ ನಾಲ್ಕು ಸರ್ಕಾರಿ ಆಸ್ಪತ್ರೆಗಳು ಜುಲೈ 1ರಿಂದ ಆನ್ ಲೈನ್ ವ್ಯವಸ್ಥೆಗೆ ಒಳಪಡಲಿವೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಮ್ ಮನೋಹರ್ ಲೋಹಿಯಾ, ನಿಮ್ಹಾನ್ಸ್ ಮತ್ತು ಸಫ್ದರ್ಜಂಗ್ ಕ್ರೀಡಾ ಗಾಯ ಕೇಂದ್ರಗಳು ಜುಲೈ 1ರಿಂದ ಆನ್ ಲೈನ್ ವ್ಯವಸ್ಥೆಗೆ ಒಳಪಡಲಿವೆ.
'ಡಿಜಿಟಲ್ ಇಂಡಿಯಾ ಅಭಿಯಾನ'ದಡಿ ಕೇಂದ್ರ ಸರ್ಕಾರ, ಇ-ಆಸ್ಪತ್ರೆ ಪೋರ್ಟಲ್ ನ್ನು ಅಭಿವೃದ್ಧಿಪಡಿಸಿದ್ದು, ಹೊರ ವಿಭಾಗ ರೋಗಿಗಳು, ತಪಾಸಣೆ, ರಕ್ತ ಪರೀಕ್ಷೆ, ಲ್ಯಾಬ್ ವರದಿ ಪಡೆದುಕೊಳ್ಳುವವರು ಆನ್ ಲೈನ್ ಮೂಲಕ ಹೆಸರು ದಾಖಲಿಸಿ ವೈದ್ಯರನ್ನು ಭೇಟಿ ಮಾಡಬಹುದು.
ಪ್ರಧಾನಿ ಮೋದಿ, ಜುಲೈ 1ರಂದು ಅಧಿಕೃತವಾಗಿ ಇ-ಆಸ್ಪತ್ರೆ ಪೋರ್ಟಲ್ ಗೆ ಚಾಲನೆ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಹಂತಹಂತವಾಗಿ ದೇಶದ ಎಲ್ಲಾ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಆನ್ ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ.