ಪುಣೆ: ಪುಣೆಯ ಸನ್ ಸಿಟಿ ಪ್ರದೇಶದ ನಿವಾಸಿಗಳಿ ಭಾನುವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಆಘಾತ ಕಾದಿತ್ತು. ಹೊರಗೆ ನಿಲ್ಲಿಸಿದ್ದ ಸುಮಾರು 85 ವಾಹನಗಳು ಸುಟ್ಟು ಕರಕಲಾಗಿದ್ದವು.
77 ದ್ವಿಚಕ್ರ ವಾಹನಗಳು ಮತ್ತು 8 ಕಾರುಗಳಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಬಗ್ಗೆ ಮಾತನಾಡಿರುವ ಸಿಂಹಗಡ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಕಾಶಿದ್, ನಾವು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಈವರೆಗೆ ಯಾರನ್ನೂ ಬಂಧಿಸಿಲ್ಲ. ಶಂಕಿತನೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಅಗ್ನಿಗಾಹುತಿಯಾದ ವಾಹನಗಳ ಪೈಕಿ ಪಿಜ್ಜಾ ಮಳಿಗೆಯ 25 ಬೈಕುಗಳೂ ಸೇರಿವೆ. ದುರ್ಷರ್ಮಿಗಳು ಎಲ್ಲ ವಾಹನಗಳ ಪೆಟ್ರೋಲ್ ಟ್ಯೂಬ್ ಗಳನ್ನು ಹೊರತೆಗೆದು ಒಮ್ಮೆಗೇ ಬೆಂಕಿ ಹಚ್ಚಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ.