ದೇಶ

ಗುತ್ತಿಗೆಯಲ್ಲಿ ಅವ್ಯವಹಾರ: ಮಹಾರಾಷ್ಟ್ರದ ಮತ್ತೊಬ್ಬ ಸಚಿವರ ಮೇಲೆ ಆರೋಪ

Sumana Upadhyaya

ಮುಂಬೈ: ಪಂಕಜ ಮುಂಡೆ ನಂತರ ಇದೀಗ  ಮಹಾರಾಷ್ಟ್ರ ಸರ್ಕಾರದ ಮತ್ತೊಬ್ಬ ಸಚಿವರು ಗುತ್ತಿಗೆ ನೀಡಿಕೆಯಲ್ಲಿ  ಭ್ರಷ್ಟಾಚಾರ ಎಸಗಿದ ಆರೋಪ ಕೇಳಿ ಬರುತ್ತಿದೆ.

ಅಲ್ಲಿನ ಶಿಕ್ಷಣ ಸಚಿವ ವಿನೋದ್ ತವ್ದೆ ಅವರು ಇ-ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸದೆ 191 ಕೋಟಿ ರೂಪಾಯಿ ಯೋಜನೆಯ  ಗುತ್ತಿಗೆ ನೀಡುವಲ್ಲಿ ಅವ್ಯವಹಾರ ಎಸಗಿದ್ದಾರೆ  ಎಂದು ಶಾಲಾ ಶಿಕ್ಷಣ ಇಲಾಖೆ ಆರೋಪಿಸಿದೆ. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಸಂಪೂರ್ಣ ತನಿಖೆ ನಡೆಸಲು ಆಗ್ರಹಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.ಇದೇ ಸಂದರ್ಭದಲ್ಲಿ ಸಚಿವರು ನೀಡಿದ್ದ ಗುತ್ತಿಗೆಗೆ ತಡೆಹಿಡಿಯಲಾಗಿದೆ.

ಮಹಾರಾಷ್ಟ್ರದಲ್ಲಿ ಸುಮಾರು 62 ಸಾವಿರ ಸರ್ಕಾರಿ ಶಾಲೆಗಳಿಗೆ ಅಗ್ನಿಶಾಮಕ ಯಂತ್ರಗಳನ್ನು ಪೂರೈಸುವ ಗುತ್ತಿಗೆ ಇದಾಗಿತ್ತು. ಕಳೆದ ಫೆಬ್ರವರಿ 11 ರಂದು ಶಾಲಾ ಶಿಕ್ಷಣ ಮಂಡಳಿಯ ನಿರ್ದೇಶಕ ಮಹಾವೀರ್ ಮಾನೆ ಅವರಿಗೆ ಗುತ್ತಿಗೆ ಕಾರ್ಯದ ಜವಾಬ್ದಾರಿ ವಹಿಸಲಾಗಿತ್ತು. ಅವರು ಫೆಬ್ರವರಿ 27ರಂದು ಥಾಣೆ ಮೂಲದ ರಿಲೈಯಬಲ್ ಫೈರ್ ಎಂಜಿನಿಯರ್ಸ್ ಸಂಸ್ಥೆಗೆ ಗುತ್ತಿಗೆ ನೀಡಿದ್ದರು. ಹಣಕಾಸು ಇಲಾಖೆ ಗುತ್ತಿಗೆಗೆ ಅನುಮೋದನೆ ನೀಡಿರಲಿಲ್ಲ. ಸಚಿವ ತವ್ದೆ ಅವರ ಸೂಚನೆ  ಮೇರೆಗೆ ಜನವರಿ 6ರಂದು  ಆದೇಶ ಹೊರಡಿಸಲಾಗಿತ್ತು ಎಂದು ಹಣಕಾಸು ಇಲಾಖೆಯ ವರದಿಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಆದರೆ ಸಚಿವ ತವ್ದೆ, ಈ ಆರೋಪವನ್ನು ನಿರಾಕರಿಸಿದ್ದಾರೆ. ಹಣಕಾಸು ಇಲಾಖೆ ಗುತ್ತಿಗೆ ಆದೇಶವನ್ನು ತಡೆಹಿಡಿದಿದ್ದು, ಇದುವರೆಗೆ ಹಣ ಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.ಹಿಂದಿನ ಕಾಂಗ್ರೆಸ್ -ಎನ್ ಸಿಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು, ಆಗಿನ ಶಿಕ್ಷ ಣ ಸಚಿವ ರಾಜೇಂದ್ರ ದರ್ದಾ ಗುತ್ತಿಗೆಗೆ ಶಿಫಾರಸ್ಸು ನೀಡಿದ್ದರು ಎಂದು ಹೇಳಿದ್ದಾರೆ.

SCROLL FOR NEXT