ಶಿಮ್ಲಾ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಶಿಮ್ಲಾದಲ್ಲಿ ಭೂಮಿ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು 10 ದಿನದೊಳಗೆ ನೀಡಬೇಕು ಎಂದು ಹಿಮಾಚಲ ಪ್ರದೇಶದ ಮಾಹಿತಿ ಆಯುಕ್ತರು ಹೇಳಿದ್ದಾರೆ.
ಪ್ರಿಯಾಂಕಾ ಖರೀದಿಸಿದ ಭೂಮಿಯ ಮಾಹಿತಿ ನೀಡುವಂತೆ ದೇಬಶಿಶ್ ಭಟ್ಟಾಚಾರ್ಯ ಆರ್ ಟಿಐ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಆಯುಕ್ತರು ಈ ಮಾಹಿತಿ ಹಂಚಿಕೊಳ್ಳಬಹುದು ಎಂದಿದ್ದರು. ಆದರೆ, ಅರ್ಜಿ ನಿರ್ವಹಿಸುವ ಅಧಿಕಾರಿ ಅದನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದರು. ಆ ಅಧಿಕಾರಿಗೆ ಸೋಮವಾರ ವಿವರ ನೀಡದ್ದಕ್ಕೆ ಯಾಕೆ ದಂಡ ವಿಧಿಸಬಾರದು ಎಂದು ಆಯೋಗ ಕೇಳಿದೆ. ಈ ಹಿಂದೆ ಪ್ರಿಯಾಂಕಾ ತಾವು ಭೂಮಿ ಖರೀದಿಸಿದ ವಿವರ ರಹಸ್ಯವಾಗಿಡುವಂತೆ ವಕೀಲರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು.