ಡ್ರೈವ್ ಮಾಡುತ್ತಲೇ ನ್ಯಾಯಾಧೀಶರ ಹತ್ಯೆಗೈದ ಐಸಿಸ್ 
ದೇಶ

ಡ್ರೈವ್ ಮಾಡುತ್ತಲೇ ನ್ಯಾಯಾಧೀಶರ ಹತ್ಯೆಗೈದ ಐಸಿಸ್

ಟ್ಯುನೀಷಿಯಾ ಮತ್ತು ಕುವೈತ್ ದಾಳಿ ಬೆನ್ನಲ್ಲೇ ಐಸಿಸ್ ಉಗ್ರರು ಈಜಿಪ್ಟ್ ನಲ್ಲಿ ಹಲವು ಹೈ ಪ್ರೊಫೈಲ್ ನ್ಯಾಯಾಧೀಶರನ್ನು ಹತ್ಯೆಗೈಯ್ಯುವ ಭಯಾನಕ ವಿಡಿಯೋವನ್ನು ಬಹಿರಂಗಪಡಿಸಿದೆ...

ಕೈರೋ: ಟ್ಯುನೀಷಿಯಾ ಮತ್ತು ಕುವೈತ್ ದಾಳಿ ಬೆನ್ನಲ್ಲೇ ಐಸಿಸ್ ಉಗ್ರರು ಈಜಿಪ್ಟ್ ನಲ್ಲಿ ಹಲವು ಹೈ ಪ್ರೊಫೈಲ್ ನ್ಯಾಯಾಧೀಶರನ್ನು ಹತ್ಯೆಗೈಯ್ಯುವ ಭಯಾನಕ ವಿಡಿಯೋವನ್ನು
ಬಹಿರಂಗಪಡಿಸಿದೆ.

ಸೋಮವಾರ ಕಾರು ಬಾಂಬ್ ಸ್ಫೋಟದಲ್ಲಿ ಈಜಿಪ್ಟ್ ನ ಖ್ಯಾತ ನ್ಯಾಯವಾದಿ ಹಿಶಾಮ್ ಬರಾಕತ್ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ. ಈ ಸ್ಫೋಟ ನಡೆಸಿದ್ದೂ ಈಜಿಪ್ಟ್ ನಲ್ಲಿರುವ ಐಸಿಸ್ ಅಂಗಸಂಸ್ಥೆ. ಬರಾಕತ್ ಅವರು ನೂರಾರು ಮಂದಿ ಇಸ್ಲಾಮಿಕ್ ಉಗ್ರರ ವಿರುದ್ಧವಾದ ಮಾಡಿದವರು. ಈ ಘಟನೆ ನಡೆದ ಸ್ವಲ್ಪ ಹೊತ್ತಲ್ಲೇ ನ್ಯಾಯಾಧೀಶರಿದ್ದ ಕಾರಿನ ಮೇಲೆ ದಾಳಿ ನಡೆಸುವ ವಿಡಿಯೋವನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ. ಉಗ್ರರು ಕುಳಿತಿದ್ದ ಕಾರು ನ್ಯಾಯಾಧೀಶರಿದ್ದ ಕಾರಿನ ಸಮೀಪಕ್ಕೆ ಬರುತ್ತಿದ್ದಂತೆ ಗನ್ ತೆಗೆಯುವ ಇಬ್ಬರು, ನ್ಯಾಯಾಧೀಶರಿದ್ದ ಕಾರಿನ ಮೇಲೆ ಗುಂಡಿನ ಮಳೆಗೆರೆಯುವ ಭೀಕರ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಇಸ್ಲಾಮಿಕ್ ಸ್ಟೇಟ್ ಎನ್ನಬೇಡಿ
ಐಸಿಸ್ ಅನ್ನು ಇಸ್ಲಾಮಿಕ್ ಸ್ಟೇಟ್ ಎಂದು ಕರೆಯಬೇಡಿ. ಹಾಗೆ ಕರೆದರೆ ಜಗತ್ತಿನಲ್ಲಿರುವ ಎಷ್ಟೋ ಮುಸ್ಲಿಮರಿಗೆ ಜಿಗುಪ್ಸೆ ಹುಟ್ಟಬಹುದು. ಶ್ರೇಷ್ಠ ಧರ್ಮವೊಂದನ್ನು ಉಗ್ರರು ಈ ರೀತಿ ಅಡ್ಡದಾರಿಗೆ ಎಳೆಯುತ್ತಿರುವ ಬಗ್ಗೆ ಬೇಸರವಾಗಬಹುದು ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಸೋಮವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT