ದೇಶ

ಸೆಲ್ಫಿ ವಿತ್ ಡಾಟರ್ : ದಿಗ್ವಿಜಯ್ ಸಿಂಗ್ ಫೋಟೋ ಹಾಕಿ ಅಮೆರಿಕಾ ವೆಬ್ ಸೈಟ್ ಎಡವಟ್ಟು

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸೆಲ್ಫಿ ವಿತ್ ಡಾಟರ್ ಅಭಿಯಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವುದು ಹಳೆಯ ಸುದ್ದಿ. ಈಗ ಅಭಿನಾಯದ ಬಗ್ಗೆ ಸುದ್ದಿ ಪ್ರಕಟಿಸುವ ಭರದಲ್ಲಿ ಸೆಲ್ಫಿ ವಿತ್ ಡಾಟರ್ ಶೀರ್ಷಿಕೆಯಡಿ ಪತ್ರಕರ್ತೆ ಅಮೃತಾ ರೈ ಹಾಗೂ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಫೋಟೋವನ್ನು ಪ್ರಕಟಿಸಿ ಅಮೆರಿಕಾದ ವುಮೆನ್ ಇನ್ ದಿ ವರ್ಲ್ಡ್ ಎಂಬ  ವೆಬ್ ಸೈಟ್  ಯಡವಟ್ಟು ಮಾಡಿದೆ.

ಕಳೆದ ವರ್ಷ ಅಮೃತಾ ರೈ ಅವರನ್ನು ವಿವಾಹವಾಗುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್,  ಅಮೃತಾ ರೈ ಅವರೊಂದಿಗೆ ತಾವಿದ್ದ ಫೋಟೊಗಳನ್ನು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಅಪ್ ಲೋಡ್  ಮಾಡಿದ್ದರು. ಆದರೆ ವಿವಾಹವಾಗಬೇಕಿದ್ದ ಜೋಡಿಯನ್ನು ತಂದೆ ಮಗಳೆಂದು ಭಾವಿಸಿ ವುಮೆನ್ ಇನ್ ದಿ ವರ್ಲ್ಡ್ ವೆಬ್ ಸೈಟ್ ಸೆಲ್ಫಿ ವಿತ್ ಡಾಟರ್ ಶೀರ್ಷಿಕೆಯಡಿ ಅವರಿಬ್ಬರ ಫೋಟೋ ಪ್ರಕಟಿಸಿದೆ.

ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ಫೋಟೊ ಗಮನಿಸಿರುವ ಟ್ವಿಟರ್ ಬಳಕೆದಾರರೊಬ್ಬರು, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ಲೇವಡಿ ಮಾಡಿದ್ದು ಇದು ಸೆಲ್ಫಿ ವಿತ್ ಡಾಟರ್ ಗಾಗಿ ಸೆಲ್ಫಿ ವಿಥ್ ಡಾಟರ್ ಏಜ್ಡ್  ಗರ್ಲ್ ಫ್ರೆಂಡ್( ಸೆಲ್ಫಿ ವಿತ್ ಡಾಟರ್ ಗಾಗಿ ಮಗಳ ವಯಸ್ಸಿನ ಪ್ರೇಯಸಿಯೊಂದಿಗೆ ಸೆಲ್ಫಿ) ಎಂದು ವ್ಯಂಗ್ಯವಾಡಿದ್ದಾರೆ.

ವೆಬ್ ಸೈಟ್ ಮಾತ್ರ ಅಮೃತಾ ರೈ ಹಾಗೂ ದಿಗ್ವಿಜಯ್ ಸಿಂಗ್ ಫೋಟೊವನ್ನು ನಿಜವಾಗಿಯೂ ಸೆಲ್ಫಿ ವಿತ್ ಡಾಟರ್ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸೆಲ್ಫಿ ವಿತ್ ಡಾಟರ್ಸ್ ಅಭಿಯಾನ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿದ್ದು, ಅಭಿಯಾನದಲ್ಲಿ ಪಾಲ್ಗೊಂಡವರ ಸೆಲ್ಫಿಗಳನ್ನು ಪತ್ರಿಕೆಗಳು ಪ್ರಕಟಿಸುತ್ತಿವೆ. ಇದರಲ್ಲಿ ಕೆಲವು ಭಾರತೀಯರಲ್ಲದವರು ಭಾಗವಹಿಸಿದ್ದಾರೆ. ತಮ್ಮ ಫೋಟೊ ಪ್ರಕಟವಾಗಿರುವುದಕ್ಕೆ ದಿಗ್ವಿಜಯ್ ಸಿಂಗ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

SCROLL FOR NEXT