ದೇಶ

ಮಗನ ಮಾಂಸದ ಅಡುಗೆ ಮಾಡಿ ಹೆತ್ತ ತಾಯಿಗೇ ಉಣಿಸಿದ ಇಸಿಸ್!

ಇದಕ್ಕಿಂತ ನೀಚ, ಹೇಯ ಕೌರ್ಯ ಬೇರಿನ್ಯಾವುದಾದರೂ ಇದೆಯೇ? ತಾಯಿಯ ಮುಂದೆಯೇ ಮಗನ ಹತ್ಯೆ ಮಾಡುವಂಥ ಅನೇಕ ಮನಸ್ಥಿತಿಗಳ ಕುರಿತು ನಾವು ಕೇಳಿಯೇ ಇದ್ದೇವೆ...

ಲಂಡನ್: ಇದಕ್ಕಿಂತ ನೀಚ, ಹೇಯ ಕೌರ್ಯ ಬೇರಿನ್ಯಾವುದಾದರೂ ಇದೆಯೇ? ತಾಯಿಯ ಮುಂದೆಯೇ ಮಗನ ಹತ್ಯೆ ಮಾಡುವಂಥ ಅನೇಕ ಮನಸ್ಥಿತಿಗಳ ಕುರಿತು ನಾವು ಕೇಳಿಯೇ ಇದ್ದೇವೆ. ಆದರೆ, ಹೆತ್ತ ತಾಯಿಗೇ ಮಗನ ಮಾಂಸವನ್ನೇ ಉಣ್ಣಿಸುವಷ್ಟು ಕಟುಕರು ಈ ಜಗತ್ತಿನಲ್ಲಿದ್ದಾರಾ?...

ಇದ್ದಾರೆ. ಇಸಿಸ್‍ನಲ್ಲಿದ್ದಾರೆ! ಮಾನವತ್ವಕ್ಕೇ ಸವಾಲೆಸೆಯುವಂಥ ಉಗ್ರರ ಈ ಮುಖವನ್ನು ಕುರ್ದಿಶ್ ಹೋರಾಟಗಾರ ಯಾಸಿರ್ ಅಬ್ದುಲ್ಲಾ ಎಂಬಾತ ಬಹಿರಂಗಪಡಿಸಿದ್ದಾನೆ. ಆ ನತದೃಷ್ಟ ತಾಯಿ ಕಥೆಯನ್ನು ಇಡೀ ಜಗತ್ತಿನ ಮುಂದೆ ತೆರೆದಿಟ್ಟಿದ್ದಾನೆ. ಇತ್ತೀಚೆಗೆ ಇರಾಕ್‍ನ ಹಳ್ಳಿಯೊಂದರ ಮೇಲೆ ದಾಳಿ ನಡೆಸಿದ್ದ ಇಸಿಸ್ ಉಗ್ರರು ಕುರ್ದಿಶ್ ಜನಾಂಗದ ಹಲವರನ್ನು ಹೊತ್ತೊಯ್ದಿದ್ದರು. ಹೀಗೆ ಉಗ್ರರು ಹೊತ್ತೊಯ್ದವರಲ್ಲಿ ಈ ತಾಯಿಯ ಪುತ್ರನೂ ಇದ್ದ. ಅಪಹೃತರೊಂದಿಗೆ ಉಗ್ರರು ಯೊವ ರೀತಿ ನಡೆದುಕೊಳ್ಳುತ್ತಾರೆನ್ನುವುದನ್ನು ಈ ತಾಯಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನನ್ನು ಹೇಗಾದರೂ ಮಾಡಿ ಬಿಡಿಸಿಕೊಂಡು ಬರಲು ಆಕೆ ನಿರ್ಧರಿಸುತ್ತಾಳೆ.

ಉಗ್ರರ ಕಾಲಿಗೆ ಬಿದ್ದಾದರೂ ಮಗನನ್ನು ಬಿಡಿಸಿಕೊಂಡು ಬರುತ್ತೇನೆಂದುಕೊಂಡು ಇಸಿಸ್ ಉಗ್ರರ ಕಾರಸ್ಥಾನವಾದ ಮಸೂಲ್‍ಗೆ ತೆರಳುತ್ತಾಳೆ. ಮಗನನ್ನು ತೋರಿಸಿ ಎಂದು ಉಗ್ರರಿಗೆ ದುಂಬಾಲು ಬೀಳುತ್ತಾಳೆ. ಈ ತಾಯಿಯ ಕಣ್ಣೀರು ನೋಡಿದ ಉಗ್ರರು, ಮೊದಲು ದಣಿವಾರಿಸಿಕೊಳ್ಳಿ. ಹೊಟ್ಟೆ ತುಂಬಿಸಿಕೊಳ್ಳಿ. ನಂತರ ಮಗನನ್ನು ನೋಡುವಿರಂತೆ ಎಂದು ಹೇಳುತ್ತಾರೆ. ಕೆಲವೇ ಹೊತ್ತಿನಲ್ಲಿ ಆಕೆಯ ಮುಂದೆ ಚಹಾ ತಂದಿಡುತ್ತಾರೆ. ಕೆಲಹೊತ್ತಿನ ಬಳಿಕ ಆಕೆಗೆ ಮಾಂಸದ ಊಟವನ್ನೂ ಬಡಿಸಲಾಗುತ್ತದೆ.

ಕೌರ್ಯಕ್ಕೆ ಹೆಸರುವಾಸಿಯಾದ ಉಗ್ರರ ಈ ಉಪಚಾರ ಕಂಡು ಒಂದು ಕ್ಷಣ ಈ ತಾಯಿಗೆ ನಂಬಿಕೆಯೇ ಬರಲಿಲ್ಲ. ಆದರೂ ಉಗ್ರರ ಈ ಅಪರೂಪದ ಉಪಚಾರ ಕಂಡು ಮನಸ್ಸಿನೊಳಗೇ ಕೃತಜ್ಞತೆ ಅರ್ಪಿಸುತ್ತಾಳೆ. ಹೊಟ್ಟೆತುಂಬಿದ ಬಳಿಕ ಮಗ ಎಲ್ಲಿ ಎಂದಾಗ, ಗಹಗಹಿಸಿ ನಕ್ಕ ಉಗ್ರರು ಕೊಟ್ಟದ್ದು ಒಂದೇ ಉತ್ತರ. `ನೀನೇ ಈಗ ತಿಂದೆಯಲ್ಲ'! ಈ ಉತ್ತರ ಕಿವಿಗೆ ಬೀಳುತ್ತಿದ್ದಂತೆ ವೃದ್ಧ ತಲೆತಿರುಗಿ ಬೀಳುವುದೊಂದೇ ಬಾಕಿ.ಯಾರಿಗಾಗಿ ಅಷ್ಟೊಂದು ದೂರದಿಂದ ಜೀವವನ್ನೇ ಪಣವಾಗಿಟ್ಟು ಬಂದಿದ್ದಳೋ, ಆಕೆಯನ್ನೇ ಉಗ್ರರು ತುಂಡು ತುಂಡಾಗಿ ಕತ್ತರಿಸಿ ಅಡುಗೆ ಮಾಡಿ ಬಡಿಸಿದ್ದರು ಈ ನಿರ್ದಯಿ ಮೃಗಗಳು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT