ದೇಶ

ಆಪ್ ರಾಷ್ಟ್ರೀಯ ಸಂಚಾಲಕ ಹುದ್ದೆಗೆ ಕೇಜ್ರಿವಾಲ್ ರಾಜಿನಾಮೆ

Lingaraj Badiger

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಗೆ ಬುಧವಾರ ರಾಜಿನಾಮೆ ನೀಡಿದ್ದಾರೆ.

ಕೇಜ್ರಿವಾಲ್ ಅವರು ಇಂದು ಬೆಳಗ್ಗೆ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ತಮ್ಮ ರಾಜಿನಾಮೆ ಪತ್ರ ರವಾನಿಸಿದ್ದು, ದೆಹಲಿ ಮುಖ್ಯಮಂತ್ರಿಯಾಗಿರುವುದರಿಂದ ಎರಡೂ ಹುದ್ದೆಗಳನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ತಾವು ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಪಕ್ಷದ ಆಂತರಿಕ ಬಿಕ್ಕಟ್ಟು ಶಮನಕ್ಕಾಗಿ ಇಂದು ಆಮ್ ಆದ್ಮಿ ಪಕ್ಷದ 21 ಸದಸ್ಯರ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆಯಲಾಗಿದ್ದು, ಸಭೆಗೂ ಮುನ್ನವೇ ಅರವಿಂದ್ ಕೇಜ್ರಿವಾಲ್ ರಾಜಿನಾಮೆ ನೀಡಿದ್ದಾರೆ. ಇದು ಕೇಜ್ರಿವಾಲ್ ಅವರ ಎರಡನೇ ರಾಜಿನಾಮೆಯಾಗಿದ್ದು, ಈ ಬಾರಿಯೂ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಅವರ ರಾಜಿನಾಮೆನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಫೆಬ್ರುವರಿ 26ರಂದೆ ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಗೆ ರಾಜಿನಾಮೆ ನೀಡಿದ್ದರು. ಆದರೆ ರಾಷ್ಟ್ರೀಯ ಕಾರ್ಯಕಾರಣಿ ರಾಜಿನಾಮೆಯನ್ನು ತಿರಸ್ಕರಿಸಿತ್ತು ಎಂದು ಆಪ್ ಮುಖಂಡ ಆಶುತೋಷ್ ಅವರು ಹೇಳಿದ್ದಾರೆ.

SCROLL FOR NEXT