ನವದೆಹಲಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕಳೆದ 3 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ರೈತರನ್ನು ಕಂಗೆಡಿಸಿದೆ.
ಹಲವು ರಾಜ್ಯಗಳಲ್ಲಿ ಮಂಗಳವಾರವೂ ಭಾರಿ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಸಿದೆ. ಮಹಾರಾಷ್ಟ್ರದ ವಿದರ್ಭದ ರೈತರಿಗೆ ಈ ಬಾರಿ ಅಕಾಲಿಕ ಮಳೆಯು ಆಘಾತ ಉಂಟುಮಾಡಿದೆ.
ಮಳೆಯಿಂದಾಗಿ ರು.1 ಸಾವಿರ ಕೋಟಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿವೆ. ರಾಜಸ್ಥಾನದಲ್ಲಿ ಮಂಗಳವಾರ ನಾಲ್ಕು ಮಂದಿ ಮೃತಪಟ್ಟಿದ್ದಾರೆ. 20 ಜಿಲ್ಲೆಗಳಲ್ಲಿ ಭಾರಿ ಬೆಳೆ ಹಾನಿಯಾಗಿವೆ. ಉತ್ತರ ಪ್ರದೇಶದಲ್ಲೂ ಮಳೆಯು ರೈತರ ನಿದ್ದೆಗೆಡಿಸಿದೆ.