ನವದೆಹಲಿ: ಸನ್ ಫಾರ್ಮಾ ಮಾಲೀಕ ಉದ್ಯಮಿ ದಿಲೀಪ್ ಸಾಂಘ್ವಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ವಿಶ್ವದ 2ನೇ ಅತ್ಯಂತ ದೊಡ್ಡ ಜೆನ್ರಿಕ್ ಮೆಡಿಸಿನ್ ಉತ್ಪಾದಕರಾದ ದಿಲೀಪ್, ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಯ ಮುಖೇಶ್ ಅಂಬಾನಿಯನ್ನೂ ಹಿಂದಿಕ್ಕಿದ್ದಾರೆ.
ಫೋರ್ಬ್ಸ್ ಬಿಡುಗಡೆಗೊಳಿಸಿರುವ ದೇಶದ ಶ್ರೀಮಂತರ ಸಾಲಿನಲ್ಲಿ ದಿಲಿಪ್ ಸಾಂಘ್ವಿ ಅಗ್ರಸ್ಥಾನಕ್ಕೇರಿದ್ದಾರೆ. 8 ವರ್ಷಗಳಿಂದ ದೇಶದ ಅತಿ ಶ್ರೀಮಂತ ಖ್ಯಾತಿ ಗಳಿಸಿದ್ದ ಅಂಬಾನಿಯನ್ನು ಇದೇ ಮೊದಲ ಬಾರಿಗೆ ದಿಲೀಪ್ ಸಾಂಘ್ವಿ ಹಿಂದಿಕ್ಕಿದ್ದಾರೆ. ದಿಲೀಪ್ ಸಾಂಘ್ವಿ ವಾರ್ಷಿಕ 21.5 ಬಿಲಿಯನ್ ಡಾಲರ್ ನಿವ್ವಳ ಲಾಭ ಗಳಿಸಿದ್ದು, ಇದು ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಗಿಂತ 1.1 ಬಿಲಿಯನ್ ಡಾಲರ್`ನಷ್ಟು ಹೆಚ್ಚಿದೆ.
ಕಳೆದ ಒಂದೇ ವರ್ಷದಲ್ಲಿ ದಿಲೀಪ್ ಸಾಂಘ್ವಿ ಕಂಪನಿ ನಿವ್ವಳ ಲಾಭ 4.5 ಬಿಲಿಯನ್ ಡಾಲರ್‘ನಷ್ಟು ಹೆಚ್ಚಿಗೆಯಾಗಿದ್ದರೆ ಮುಖೇಶ್ ಅಂಬಾನಿ ಕಂಪನಿಯ ನಿವ್ವಳ ಲಾಭ ಕೇವಲ 153 ಮಿಲಿಯನ್‘ನಷ್ಟು ಮಾತ್ರ ಏರಿಕೆ ಕಂಡಿದೆ.