ಇರಾಕ್‍ನ ಐತಿಹಾಸಿಕ ನಗರ ನಿಮೃದ್ ನಾಮಾವಶೇಷ 
ದೇಶ

ಇಸಿಸ್‍ನಿಂದ ಇರಾಕ್‍ನ ಐತಿಹಾಸಿಕ ನಗರ ನಿಮೃದ್ ನಾಮಾವಶೇಷ

ಬಾಗ್ದಾದ್/ಸಿರಿಯಾ: ರಕ್ತಪಿಪಾಸು ಸಂಘಟನೆ ಇಸಿಸ್‍ ಇದುವರೆಗೆ ಅತ್ಯಾಚಾರ, ಕೊಲೆ, ಅಂಗಾಗ ಮಾರಾಟದಲ್ಲಿ ತೊಡಗಿತ್ತು. ಇದೀಗ ಈ ದುಷ್ಟ ಸಂಘಟನೆ ಚರಿತ್ರೆಯನ್ನೇ ನಾಶ ಮಾಡಿದೆ.

ಯುದ್ಧಗ್ರಸ್ತ ಇರಾಕ್‍ನ ಪ್ರಮುಖ ನಗರವಾಗಿರುವ ಮಾಸೂಲ್‍ನ ದಕ್ಷಿಣ ಭಾಗದಲ್ಲಿರುವ ನಿಮೃದ್ ಅನ್ನು ಅದು ನುಂಗಿ ನೀರು ಕುಡಿದಿದೆ. ವಿಶ್ವದ ಪ್ರಾಚೀನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಸ್ಥಳವನ್ನು ಬಾಂಬ್ ಮತ್ತು ಯುದ್ಧ ಟ್ಯಾಂಕ್‍ಗಳಿಂದ ನಾಮಾವ ಶೇಷಗೊಳಿಸಿದೆ. ಅಲ್ಲಿದ್ದ ಅತ್ಯಮೂಲ್ಯ ಕಲಾಕೃತಿಗಳನ್ನು ಉಗ್ರರು ಹೊತ್ತೊಯ್ದಿದ್ದಾರೆ. ಇರಾಕ್‍ನ ಪ್ರವಾಸೋದ್ಯಮ ಇಲಾಖೆಯೇ ಇದನ್ನು ಖಚಿತಪಡಿಸಿದೆ.

ಆರಂಭ ಹೇಗೆ?

ಯುನೆಸ್ಕೋ ಪಟ್ಟಿಯಲ್ಲಿರುವ ಈ ತಾಣವನ್ನು ತಾನು ಗುರಿಯಾಗಿಸಿರುವ ಬಗ್ಗೆ ಇಸಿಸ್ ಸಂಘಟನೆ ಜಾಲತಾಣಗಳಲ್ಲಿ ವೀಡಿಯೇ ಫೋಸ್ಟ್ ಮಾಡಿತ್ತು. ಗುರುವಾರ ಮಧ್ಯಾಹ್ನದ ಪ್ರಾರ್ಥನೆ ಮುಕ್ತಾಯವಾಗುತ್ತಿದ್ದಂತೆ ನೂರಾರು ಸಂಖ್ಯೆಯ ಉಗ್ರರು ಈ ಕೃತ್ಯಕ್ಕಿಳಿದರು.
ಇರಾಕ್ ನಗರದ ಮಾಸೂಲ್ ನಗರದ ಸಮೀಪವಿರುವ ಬುಡಕಟ್ಟು ಜನಾಂಗದವರು ಈ ದಾಳಿಗೆ ಪ್ರತ್ಯಕ್ಷ ಸಾಕ್ಷಿ. ಅವರೇ ಹೇಳುವಂತೆ ಟ್ಯಾಂಕರ್‍ಗಳು, ಬಾಂಬ್‍ಗಳ ಮೂಲಕ ಉಗ್ರರು ದಾಳಿ ಎಸಗಿದರು. ನೋಡ ನೋಡುತ್ತಿದ್ದಂತೆ ಅಮೂಲ್ಯ ಕಲಾಕೃತಿಗಳನ್ನು ನಾಶವಾಯಿತು.

ವಿಶ್ವಾದ್ಯಂತ ಖಂಡನೆ

2001ರಲ್ಲಿ ತಾಲಿಬಾನ್ ಉಗ್ರರು ಬಾಮಿಯಾನ್ ಬುದ್ಧನ ವಿಗ್ರಹಗಳನ್ನು ನೆಲಸಮಗೊಳಿಸಿದ್ದರು. ಅದೇ ಮಾದರಿಯಲ್ಲೇ ಇಸಿಸ್ ಕಟುಕರು ಅನುಸರಿಸಿದ್ದಾರೆ. ಯುನೆಸ್ಕೋ ಮಹಾ ನಿರ್ದೇಶಕ ಇರಿನಾವಾ ಬೊಕೊವಾ, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್‍ಕಿಮೂನ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಪ್ರಮುಖರು ಭಯೋತ್ಪಾದಕರ ಕುಕೃತ್ಯವನ್ನು ಖಂಡಿಸಿದ್ದಾರೆ.

90 ಸಾವಿರ ಟ್ವೀಟ್ ಖಾತೆ
ಇಸಿಸ್ ಪರವಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಟ್ವೀಟರಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಈ ಮೂಲಕ ಅವರು ಜಿಹಾದಿವಾದ ಜನಪ್ರಿಯಗೊಳಿಸುತ್ತಿದ್ದಾರೆ. 2014 ರಲ್ಲಿ 46 ಸಾವಿರ ಟ್ವಿಟರ್ ಅಕೌಂಟ್‍ಗಳನ್ನು ಐಎಸ್‍ಐಎಸ್ ಸಮೀಕ್ಷೆಯಲ್ಲಿ ಪತ್ತೆಯಾಗಿದೆ, ಎಲ್ಲ ಅಕೌಂಟ್‍ಗಳಿಗೆ 90 ಸಾವಿರ ಅನುಯಾಯಿಗಳಿದ್ದಾರೆ ಎಂದು ಎನ್‍ಇಟಿ ತಂತ್ರಜ್ಞ ಜೆ.ಎಂ. ಬರ್ಗರ್ ತಿಳಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT