ನರೇಂದ್ರ ಮೋದಿ 
ದೇಶ

ಮೋದಿ ತ್ರಿರಾಷ್ಟ್ರ ಪ್ರವಾಸ 10ರಿಂದ

ಪ್ರಧಾನಿ ನರೇಂದ್ರ ಮೋದಿ ಅವರ 3 ರಾಷ್ಟ್ರಗಳ ಪ್ರವಾಸ ಮಾ.10ರಿಂದ ಆರಂಭವಾಗಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 3 ರಾಷ್ಟ್ರಗಳ ಪ್ರವಾಸ ಮಾ.10ರಿಂದ ಆರಂಭವಾಗಲಿದೆ. ಮೋದಿ ಮಾ.10ರಿಂದ 14ರ ವರೆಗೆ ಸೆಷೆಲ್ಸ್, ಮಾರಿಷಸ್ ಹಾಗೂ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ.

ಇದು ಪ್ರಧಾನಿ ಅವರ ಈ ವರ್ಷದ ಮೊದಲ ವಿದೇಶಿ ಪ್ರವಾಸ. ಮಾ.11ರಂದು ಸೆಷೆಲ್ಸ್‍ಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿನ ಅಧ್ಯಕ್ಷ ಜೇಮ್ಸ್ ಅಲೆಕ್ಸಿಸ್ ಮಿಶೆಲ್ ಜತೆಗೆ ಮಾತುಕತೆ ನಡೆಸಲಿದ್ದಾರೆ.

ನಂತರ ಅದೇ ದಿನ ಮಾರಿಷಸ್‍ಗೆ ತೆರಳಲಿರುವ ಅವರು ಮಾ.12ರವರೆಗೆ ದ್ವೀಪ ರಾಷ್ಟ್ರದಲ್ಲಿ ತಂಗಲಿದ್ದಾರೆ. ಮಾರಿಷಸ್‍ನ ರಾಷ್ಟ್ರೀಯ ದಿನಾಚರಣೆ ಮುಖ್ಯ ಅತಿಥಿಯಾಗಿಯೂ ಪಾಲ್ಗೊಳ್ಳಲಿದ್ದಾರೆ.

ಪ್ರವಾಸದ ಕೊನೆ ಎರಡು ದಿನ ಅಂದರೆ ಮಾ.13 ಮತ್ತು 14 ಅನ್ನು ಅವರು ಶ್ರೀಲಂಕಾದಲ್ಲೇ ಕಳೆಯಲಿದ್ದಾರೆ. ಶ್ರೀಲಂಕಾ ಪ್ರವಾಸ ವೇಳೆ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರೆ ಹಿರಿಯ ರಾಜಕೀಯ ನಾಯಕರ ಜತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಈ ಭೇಟಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಕಾಲದಲ್ಲಿ ಹದಗೆಟ್ಟಿದ್ದ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಮಹತ್ವದ್ದು. ಲಂಕಾ ಪ್ರವಾಸದ ವೇಳೆ ಬೌದ್ಧರ ಧಾರ್ಮಿಕ ನಗರ ಅನುರಾಧಪುರ ಹಾಗೂ ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಫ್ನಾಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ತಮಿಳರಿಗೆ ರಾಜಕೀಯ ಅಧಿಕಾರ ನೀಡುವ ವಿಚಾರಕ್ಕೆ ಸಂಬಂಧಿಸಿಯೂ ಚರ್ಚೆ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!