ಹೈದ್ರಾಬಾದ್: ವಿಶ್ವಾದ್ಯಂತ ಸಾವಿರಾರು ಷೇರುದಾರನ್ನು ಹೊಂದಿದ್ದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್‌ಗೆ ಸಂಬಂಧಿಸಿದ ಬಹುಕೋಟಿ ಹಗರಣದ ತೀರ್ಪು ಮುಂದೂಡಲಾಗಿದೆ.
ಹೈದ್ರಾಬಾದ್ ನ ವಿಶೇಷ ನ್ಯಾಯಾಲಯ ಏಪ್ರಿಲ್ 9ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಹಗರಣ ಸಂಬಂಧ ಕಳೆದ ಡಿ.23ರಂದು ಅಂತಿಮವಾಗಿ ವಿಚಾರಣೆ ನಡೆಸಿ ವಾದ-ವಿವಾದಗಳನ್ನು ಆಲಿಸಿದ್ದ ವಿಶೇಷ ನ್ಯಾಯಾಲಯ, ಮಾ.9ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನ್ಯಾಯಾಮೂರ್ತಿ ಬಿವಿಎಲ್‌ಎನ್ ಚಕ್ರವರ್ತಿ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಸಿಬಿಐ ನ್ಯಾಯಾಲಯವು ಕಳೆದ ಆರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುಮಾರು 3000 ಪುಟಕ್ಕೀ ಅಧಿಕ ದಾಖಲೆ ಪತ್ರಗಳು ಹಾಗೂ 226 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥ ಬಿ. ರಾಮಲಿಂಗಾ ರಾಜು ಅವರನ್ನು ಬಂಧಿಸಲಾಗಿದೆ.
ಈ ಹಗರಣವನ್ನು ಲೆಕ್ಕ ವಿಭಾಗದಲ್ಲಿ ನಡೆದಿರುವ ದೇಶದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದ್ದು, ಇದು 2009ರಲ್ಲಿ ಬೆಳಕಿಗೆ ಬಂದಿತ್ತು.