ಕೆಲಸದ ಸಂದರ್ಶನದ ವೇಳೆ ಉದ್ಯೋಗಾರ್ಥಿಯ ಸಾಮರ್ಥ್ಯವನ್ನು ಅಳೆಯಲು ಸಂದರ್ಶಕರಿಗೆ ಎಷ್ಟು ಸಮಯ ಬೇಕು? ಹೆಚ್ಚು ಆಲೋಚಿಸುವುದೇನೂ ಬೇಡ. ಕೇವಲ ಐದು ನಿಮಿಷ ಸಾಕಂತೆ! ಕೆರಿಯರ್ ಬಿಲ್ಡ್ಸ್ ಇಂಡಿಯಾ ಎಂಬ ಏಜೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಭಾರತದ 400 ಕಂಪನಿಗಳು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವು.
ಪ್ರಸ್ತುತ ಸಮೀಕ್ಷೆಯಲ್ಲಿ ಸಂದರ್ಶಕರಿಗೆ ಉದ್ಯೋಗಾರ್ಥಿಗಳು ಹೇಗಿದ್ದಾರೆ? ಅವರ ಆಯ್ಕೆ ಹೇಗೆ? ಸಂದರ್ಶನ ವೇಳೆ ನಡೆಯುವ ತಪ್ಪುಗಳು ಏನೇನು? ಎಂಬುದನ್ನು ಶೇಕಡಾವಾರುಗಳಲ್ಲಿ ಹೇಳಲಾಗಿದೆ.
5 ನಿಮಿಷ
ಉದ್ಯೋಗಾರ್ಥಿ ಈ ಕೆಲಸಕ್ಕೆ ಯೋಗ್ಯನೋ ಇಲ್ಲವೋ ಎಂದು 5 ನಿಮಿಷದಲ್ಲಿ ತೀರ್ಮಾನಿಸುವ ಕಂಪನಿಗಳ ಸಂಖ್ಯೆ - ಶೇ. 56
15 ನಿಮಿಷ
15 ನಿಮಿಷದಲ್ಲಿ ಉದ್ಯೋಗಾರ್ಥಿ ಇಂಟರ್‌ವ್ಯೂನಲ್ಲಿ ಹೇಗಿದ್ದಾನೆ ಎಂದು ತೀರ್ಮಾನಿಸಿ ಕೆಲಸ ನೀಡುವ ಕಂಪನಿಗಳ ಸಂಖ್ಯೆ -ಶೇ. 91
ಬುದ್ಧಿ ಮಾತ್ರ ಸಾಲದು ಯುಕ್ತಿಯೂ ಬೇಕು
ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗೆ ಪಠ್ಯ ಪುಸ್ತಕದಲ್ಲಿರುವ ಉತ್ತರವನ್ನು ಹೇಳಿದರಷ್ಟೇ ಸಾಲದು. ಇನ್ನೊಂದು ಆಯಾಮದಲ್ಲಿ ಆಲೋಚಿಸಿ ಉತ್ತರ ಹೇಳಬೇಕು. ಭಾಷೆಯ ಬಳಕೆಗೂ ಇಲ್ಲಿ ಪ್ರಾಧಾನ್ಯತೆ ನೀಡಲಾಗುತ್ತದೆ.
ಇದು ಮಾತ್ರವಲ್ಲದೆ ನಮ್ಮ ಬಾಡಿ ಲಾಂಗ್ವೇಜ್ ಕೂಡಾ ಇಲ್ಲಿ ಪರಿಗಣಿಸಲ್ಪಡುತ್ತದೆ. ಸಂದರ್ಶನ ವೇಳೆ ಬಾಡಿ ಲಾಂಗ್ವೇಜ್‌ನಲ್ಲಿ ಉಂಟಾಗುವ ಪ್ರಧಾನ ತಪ್ಪುಗಳು
ಶೇ 70: ಮುಖ ನೋಡದೇ ಮಾತನಾಡುವುದು
ಶೇ 56 :ಕುರ್ಚಿಯಲ್ಲಿ ನೇರ ಕುಳಿತುಕೊಳ್ಳುವ ಬದಲು ಕುರ್ಚಿಯ ಮುಂದಕ್ಕೆ ಬಾಗಿ ಕುಳಿತುಕೊಳ್ಳುವುದು
ಶೇ 45 :ಮೇಜಿನ ಮೇಲೆ ಪೆನ್ನು ಅಥವಾ ಇತರ ವಸ್ತುಗಳ ಜತೆ ಆಟವಾಡುವುದು
ಶೇ 44: ಆತ್ಮವಿಶ್ವಾಸವಿಲ್ಲದ ಹಸ್ತಲಾಘವ
ಶೇ 35 :ಸರಿಯಾಗಿ ಕುಳಿತುಕೊಳ್ಳದೆ ಆಚೀಚೆ ತಿರುಗುವುದು
ಶೇ 31 :ತಲೆ ಮುಖ ತುರಿಸಿಕೊಳ್ಳುವುದು
ಶೇ31 :ಹೇಳುವ ವಿಷಯವನ್ನು ಮಾತಲ್ಲಿ ಹೇಳದೆ ಆಂಗಿಕ ಅಭಿನಯ ಮಾಡುವುದು
ಶೇ 23 : ಗಟ್ಟಿಯಾದ ಹಸ್ತಲಾಘವ