ವಾಷಿಂಗ್ಟನ್: ಒಂದು ಕ್ಷಣ ಎದೆ ಗಟ್ಟಿ ಮಾಡಿಕೊಳ್ಳಿ, ನಮ್ಮಲ್ಲಿ ಇರುವ ಅಣ್ವಸ್ತ್ರಗಳಿಗಿಂತ, ಪಾಕಿಸ್ತಾನದ ಬಳಿಯೇ ಹೆಚ್ಚು ಅಣ್ವಸ್ತ್ರಗಳಿವೆ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು.
ಅಮೆರಿಕದ ಅಣು ವಿಜ್ಞಾನಿಗಳು ಹೊರ ತಂದಿರುವ ಪತ್ರಿಕೆಯೊಂದು ಈ ಆಘಾತಕಾರಿ ಅಂಶವನ್ನು ಹೊರಹಾಕಿದೆ. ಇದರ ಪ್ರಕಾರ ಪಾಕಿಸ್ತಾನದ ಬಳಿ 120 ಅಣ್ವಸ್ತ್ರಗಳಿದ್ದರೆ, ಭಾರತದ ಬಳಿ 100 ಇವೆಯಂತೆ. ಅಂದರೆ ನಮಗಿಂತ 20 ಅಣ್ವಸ್ತ್ರ ಹೆಚ್ಚಿವೆ. ಚಿಕಾಗೋ ವಿವಿಯ ವಿಜ್ಞಾನಿಗಳು 1945 ರಿಂದ ಪರಮಾಣು ಶಸ್ತ್ರಗಳನ್ನು ಹೊಂದಿರುವ 9 ದೇಶಗಳ ಇತಿಹಾಸ ಹೇಳಿಕೊಂಡುಬಂದಿದ್ದಾರೆ. ಇದರಲ್ಲಿ ಈ ಅಂಶಗಳಿವೆ. ಉತ್ತರ ಕೊರಿಯಾ 2006, 09, 13 ರಲ್ಲಿ ಪರಮಾಣು ಪರೀಕ್ಷೆ ನಡೆಸಿದೆ.
ಯಾರ ಬಳಿ ಎಷ್ಟೆಷ್ಟು?
ಅಮೆರಿಕ.......... 5,000
ರಷ್ಯಾ............. 5,000
ಫ್ರಾನ್ಸ್ ..............300
ಚೀನಾ...............250
ಇಂಗ್ಲೆಂಡ್...........225
ಇಸ್ರೇಲ್..............80