ಪಾಟ್ನಾ: ನಿರೀಕ್ಷೆಯಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ವಿಧಾನಸಭೆ ಯಲ್ಲಿ ಬುಧವಾರ ಅವರು ತಮ್ಮ ಸರ್ಕಾರದ ಪರ 140 ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ವಿಶ್ವಾಸ ಮತಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ, ಸದನದಿಂದ ಹೊರನಡೆದಿದೆ. ಜೆಡಿಯು ಭಿನ್ನಮತೀಯ ಗುಂಪಾದ ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಸೇರಿದಂತೆ ಅವರ ಬೆಂಬಲಿಗರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೆ ಇವರು ಮತ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್, ಆರ್ ಜೆಡಿ, ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.