ಯಾಂಗೊನ್: ಮ್ಯಾನ್ಸಾರ್ ನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚು ಅಕ್ರಮ ವಲಸಿಗರನ್ನು ತುಂಬಿಕೊಂಡು ಹೋಗುತ್ತಿದ್ದ ದೋಣಿಯೊಂದು ಮುಳುಗಿ 21 ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 26 ಜನರು ನಾಪತ್ತೆಯಾದ ಘಟನೆ ಮ್ಯಾನ್ಸಾರ್ ನ ವಿಯೆಟ್ನಾಂ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ 26 ಜನರು ನಾಪತ್ತೆಯಾಗಿದ್ದು, 21 ಮೃತ ದೇಹಗಳು ಪತ್ತೆಯಾಗಿದ್ದು, ಮೃತರಲ್ಲಿ 2 ಪುರುಷರು, 19 ಮಹಿಳೆಯರಿದ್ದರು. 167 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಮುಂದುವರೆದಿದೆ ಎಂದು ವಿಯೆಟ್ನಾಂನ ಪೊಲೀಸರು ಹೇಳಿದ್ದಾರೆ.
ದೋಣಿಯಲ್ಲಿ ಮಕ್ಕಳು ಸೇರಿದಂತೆ ಮ್ಯಾನ್ಮಾರ್ ನ ಸುಮಾರು 200 ಮಂದಿ ಕ್ಯೌಕ್‌ಫ್ಯು ಪ್ರದೇಶದಿಂದ ಪಶ್ಚಿಮ ರಾಖಿನೆ ರಾಜ್ಯಕ್ಕೆ ತೆರಳುತ್ತಿದ್ದರು.ದೋಣಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಹೋಗಿದ್ದರಿಂದ ರಾತ್ರಿ 8 ಗಂಟೆಗೆ ನೀರಿನ ಮಧ್ಯದಲ್ಲಿಯೇ ದೋಣಿ ನೀರಿನಲ್ಲಿ ಮುಳುಗಿದೆ. ಘಟನೆ ವೇಳೆ ಹಲವರು ಈಜಿ ದಡ ಸೇರಿದ್ದಾರೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.