ಗುವಾಹಟಿ: ಮಸೀದಿಗಳು ಧಾರ್ಮಿಕ ಸ್ಥಳವಲ್ಲ ಅದೊಂದು ಕೇವಲ ಕಟ್ಟಡ ಮಾತ್ರ ಹಾಗಾಗಿ ಯಾವಾಗ ಬೇಕಾದರು ಅದನ್ನು ಧ್ವಂಸ ಮಾಡಬಹುದು ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾವಹಿಸಿದ್ದ ವೇಳೆ ಮಾತನಾಡಿದ ಸ್ವಾಮಿ ಅವರು, ಮಸೀದಿಗಳಲ್ಲಿ ಏನಿರುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತನ್ನ ಅಭಿಪ್ರಾಯ ಒಪ್ಪದ ಯಾವುದೇ ವ್ಯಕ್ತಿಯ ಜೊತೆ ಈ ಬಗ್ಗೆ ಗಂಭೀರ ಚರ್ಚೆಗೂ ಸಿದ್ದ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಸ್ವಾಮಿ ಹೇಳಿಕೆ ನಂತರ ಸಾಕಷ್ಟು ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದೆ. ಅಷ್ಟೇ ಅಲ್ಲ ಕ್ರಿಷಾಕ್ ಮುಕ್ತಿ ಸಂಗ್ರಾಮ್ ಸಮಿತಿ(ಕೆಎಂಎಸ್ಎಸ್) ಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ.