ದೇಶ

ಶರದ್ ಯಾದವ್ ಹೇಳಿಕೆಗೆ ಮಹಿಳಾ ಸಂಸದೆಯರಿಂದ ತೀವ್ರ ವಿರೋಧ

Srinivasamurthy VN

ನವದೆಹಲಿ: ದಕ್ಷಿಣ ಭಾರತದ ಮಹಿಳೆಯರ ಮೈಬಣ್ಣ ಕುರಿತಂತೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಬಿಹಾರದ ಜೆಡಿಯು ನಾಯಕ ಶರದ್ ಯಾದವ್ ಹೇಳಿಕೆಗೆ ಮಹಿಳಾ ಸಂಸದೆಯರಿಂದ ಸೋಮವಾರ ತ್ರೀವ್ರ ವಿರೋಧ ವ್ಯಕ್ತವಾಗಿದೆ.

ಸದನದಲ್ಲಿ ಗುರುವಾರ ವಿಮಾ ಮಸೂದೆ ಕುರಿತಂತೆ ಮಹತ್ವದ ಚರ್ಚೆ ನಡೆಯುವಾಗ ಏಕಾಏಕಿ ದಕ್ಷಿಣ ಭಾರತದ ಮಹಿಳೆಯರ ಬಗ್ಗೆ ಮಾತನಾಡಿದ ಶರದ್ ಯಾದವ್ ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರು ಸೌಂದರ್ಯವತಿಯರಾಗಿರುತ್ತಾರೆ ಮತ್ತು ಬಹಳ ಸುಂದರವಾಗಿ ನೃತ್ಯ ಮಾಡುತ್ತಾರೆ. ಅವರಂತಹ ಮಹಿಳೆಯರು ಇಲ್ಲಿ ಸಿಗುವುದಿಲ್ಲ ಎಂದು ಹೇಳಿದ್ದರು.

ಅಲ್ಲದೆ, ವಿವಾದಗಳಲ್ಲಿ ಸಮಸ್ಯೆ ಎದುರಿಸುತ್ತಿರವ ನಿರ್ಮಾಪಕಿ ಲೆಸ್ವಿ ಉಡ್ವಿನ್ ಅವರ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರವು ನಿರ್ಮಾಪಕಿ ಬೆಳ್ಳಗಿದ್ದಾಳೆಂಬ ಕಾರಣದಿಂದಲೇ ಅನುಮತಿ ದೊರಕಿರಬೇಕು ಎಂದು ವ್ಯಂಗ್ಯವಾಡಿದ್ದರು. ಶರದ್ ಯಾದವ್ ಅವರ ಈ ಹೇಳಿಕೆಗಳಿಗೆ ಸಂಸತ್ ನಲ್ಲಿ ತೀವ್ರ ವಿರೋಧವ್ಯಕ್ತವಾಗಿದ್ದು, ಹೇಳಿಕೆ ಕುರಿತಂತೆ ಶರದ್ ಯಾದವ್ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಅಧಿಕಾರದಲ್ಲಿರುವ ಜನಪ್ರತಿನಿಧಿಗಳಾದ ವ್ಯಕ್ತಿಗಳಿಗೆ ಅನೇಕ ಜವಾಬ್ದಾರಿಗಳಿರುತ್ತವೆ. ಸದನದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವುದು ಹಿರಿಯ ಹಾಗೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಶೋಭೆ ತರುವಂತಹದ್ದಲ್ಲ. ನಿಮ್ಮ ಹೇಳಿಕೆ ಜನರಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ತಮ್ಮ ಈ ಹೇಳಿಕೆ ಕುರಿತಂತೆ ಕೂಡಲೇ ಕ್ಷಮಾಪಣೆ ಕೇಳುವಂತೆ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.

ಇದೇ ವೇಳೆ ಸ್ಮೃತಿ ಇರಾನಿಯವರೊಂದಿಗೆ ಕೈ ಜೋಡಿಸಿದ ಡಿಎಂಕೆ ಸದಸ್ಯೆ ಕನಿಮೊಳಿ ಎಲ್ಲಾ ಪಕ್ಷದಲ್ಲೂ ಹೆಣ್ಣುಮಕ್ಕಳಿದ್ದಾರೆ ಶರದ್ ಯಾದವ್ ಹೇಳಿಕೆಗೆ ಎಲ್ಲರೂ ವಿರೋಧ ವ್ಯಕ್ತಪಡಿಸಬೇಕಿದೆ ಎಂದು ತಮ್ಮ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT