ಘಟನೆ ಖಂಡಿಸಿ ಥಳೀಯ ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ 
ದೇಶ

ಅತ್ಯಾಚಾರ ನಡೆದು 3 ದಿನ ಕಳೆದರೂ ಆರೋಪಿಗಳ ಬಂಧನವಿಲ್ಲ

ರಾಣಾಘಾಟ್: 71 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ದೇಶಾದಾದ್ಯಂತ ತಲ್ಲಣ ಉಂಟು ಮಾಡಿದ್ದು...

ರಾಣಾಘಾಟ್: ರಾಣಾಘಾಟ್: 71 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ ದೇಶಾದಾದ್ಯಂತ ತಲ್ಲಣ ಉಂಟು ಮಾಡಿದ್ದು, ಅತ್ಯಾಚಾರ ನಡೆದು 3 ದಿನಗಳ ಕಳೆದರೂ ಪೊಲೀಸರಿಂದ ಕಾಮುಕರ ಬಂಧನ ಸಾಧ್ಯವಾಗಿಲ್ಲ.

ನಾಡಿಯಾ ಜಿಲ್ಲೆಯ ಗಂಗ್ನಾಪುರದಲ್ಲಿರುವ ಕಾನ್ವೆಂಟ್ ಗೆ ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಒಳ ನುಗ್ಗಿದ ರೌಡಿಗಳು ಹಣ ದೋಚಲು ಮುಂದಾಗಿದ್ದಾರೆ. ಈ ವೇಳೆ ರೌಡಿಗಳನ್ನು ಕಂಡ ಸನ್ಯಾಸಿನಿ ಹಣದೋಚಲು ಬಿಡದೆ ತಡೆವೊಡ್ಡಿದ್ದಾರೆ. ಸನ್ಯಾಸಿನಿಯ ವರ್ತನಿಯಿಂದ ತೀರ್ವ ಕೆಂಡಾಮಂಡಲವಾದ ರೌಡಿಗಳು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ನಂತರ ಸ್ಥಳದಲ್ಲಿ ಅಲ್ಮೆರಾದಲ್ಲಿದ್ದ 12 ಲಕ್ಷವನ್ನು ದೋಚಿ ಸ್ಥಳದಿಂದ ಕಾಲ್ಕಿತ್ತಿದ್ದರು.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣದಲ್ಲಿ 4 ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಘಟನೆ ನಡೆದು ಮೂರು ದಿನಗಳು ಕಳೆದಿದ್ದರು ಈವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲವಾದ್ದರಿಂದ ಆರೋಪಿಗಳ ಹಿಡಿದುಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಸನ್ಯಾಸಿನಿಯ ಆರೋಗ್ಯದಲ್ಲಿ ಈಗಾಗಲೇ ಚೇತರಿಕೆ ಕಂಡು ಬಂದಿದ್ದು, ನೀರು ಮತ್ತು ದ್ರವ ಆಹಾರ ಸೇವಿಸುತ್ತಿದ್ದಾರೆ ಎಂದು ರಾಣಾಘಾಟ್ ನ ಆಸ್ಪತ್ರೆಯ ವರಿಷ್ಠ ಎ.ಕೆ. ಮಂಡೋಲ್ ಹೇಳಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸ್ಥಳೀಯ ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ಆರೋಪಿಗಳನ್ನು ಬಂಧಿಸುವಂತೆ ಕಾನ್ವೆಂಟ್ ನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT