ಕಲ್ಯಾಣ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಸೇರಿದ್ದ ಭಾರತೀಯ ಮೂಲದ ಯುವಕನೊಬ್ಬ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ. ಮತ್ತೇಂದು ಭಾರತಕ್ಕೆ ಬರುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾನೆ.
ಕಳೆದ ವರ್ಷ ಕಲ್ಯಾಣದಿಂದ ತೆರಳಿದ್ದ ನಾಲ್ವರು ಯುವಕರ ಪೈಕಿ ಅರೀಬ್ ಮಜೀದ್ ಎಂಬಾತ ಭಾರತಕ್ಕೆ ಮರಳಿದ್ದು, ಆದರೆ ಅಲ್ಲೆ ಉಳಿದಿರುವ ಫಹಾದ್ ಶೇಖ್ ತನ್ನ ಕುಟುಂಬಸ್ಥರೊಂದಿಗೆ ಸಂಕರ್ಪಕದಲ್ಲಿದ್ದು, ಪೋಷಕರ ಒತ್ತಾಯಕ್ಕೆ ಮಣಿಯದ ಶೇಖ್ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ. ಮತ್ತೆ ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ತಮ್ಮ ಜತೆ ಬಂದಿದ್ದ ಶಮೀಮ್ ಟಂಕಿ ಎಂಬಾತ ಮೃತಪಟ್ಟಿದ್ದಾನೆ ಎಂಬ ಮಾಹಿತಿ ನೀಡಿದ್ದು, ಟಂಕಿಯ ಫೋಟೋವನ್ನು ಕಳುಹಿಸಿದ್ದಾನೆ.
ಅರೀಬ್ ಮಜೀದ್ ಸ್ವದೇಶಕ್ಕೆ ಮರಳಿದಂತೆ ತಮ್ಮ ಮಗನು ಬರಲಿ ಎಂದು ಪೋಷಕರು ಹಾಗೂ ಕೆಲ ಸ್ನೇಹಿತರು ಪೋನ್ ಅಥವಾ ಸ್ಕೈಪೆ ಮೂಲಕ ಸಂಕರ್ಪಕಿಸುತ್ತಿದ್ದು ಭಾರತಕ್ಕೆ ಮರಳುವಂತೆ ಒತ್ತಾಯಿಸಿದ್ದರು.