ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಭಾರಿ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟ ಹೊಗೆ ಸಂಸತ್ ಆವರಣವನ್ನು ಆವರಿಸಿದೆ.
ಭವನದ ಬಳಿಯ ಪವರ್ ಸ್ಟೇಷನ್ ಬಳಿ ಈ ಅವಗಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಹತ್ತಿರುವ ಶಂಕೆಯನ್ನು ವ್ಯಕ್ತವಾಗಿದೆ. ಸದ್ಯ ಕಮಾಂಡೋಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.