ದೇಶ

38 ದೇಶಗಳ ಸೇನಾ ಸಿಬ್ಬಂದಿಗಳಿಗೆ ಭಾರತದಲ್ಲಿ ತರಬೇತಿ ಸಾಧ್ಯತೆ: ಪರಿಕರ್

Mainashree

ಭುಬನೇಶ್ವರ್ : ಶಸ್ತ್ರಾಸ್ತ್ರ ರಫ್ತು ಹಾಗೂ 38 ದೇಶಗಳ ಸೈನಿಕರಿಗೆ ಸೇನಾ ತರಬೇತಿ ನೀಡಲು ಭಾರತ ಚಿಂತನೆ ನಡೆಸಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕರ್ ಹೇಳಿದ್ದಾರೆ.

ಸುಮಾರು 38 ದೇಶಗಳು ತಮ್ಮ ಸೇನಾ ಸಿಬ್ಬಂದಿಗಳನ್ನು ಭಾರತಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಅವರಿಗೆ ಭಾರತದಲ್ಲೇ ಉತ್ತಮ ತರಬೇತಿ ನೀಡಲು ನಿರ್ಧರಿಸಲಾಗಿದೆ.

ರಕಣಾ ವಲಯಕ್ಕೆ ಸಂಬಂಧ ಪಟ್ಟ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲು ಭಾರತ ಯೋಜನೆ ರೂಪಿಸುತ್ತಿದೆ. ಆಗ ಆ ದೇಶಗಳು ಶಸ್ತ್ರಾಸ್ತ್ರಗಳಿಗಾಗಿ ಭಾರತದ ಮೇಲೆ ಅವಲಂಬಿತವಾಗುತ್ತವೆ ಎಂದು ಪರಿಕರ್ ಹೇಳಿದ್ದಾರೆ.

ಭದ್ರತಾ ದೃಷ್ಟಿಯಿಂದ ಯಾವ ದೇಶದ ಸೇನಾ ಸಿಬ್ಬಂದಿಗಳು ಬರುತ್ತಿದ್ದಾರೆ ಎಂಬ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಭಾರತ ಯಾವುದೇ ದೇಶದ ಮೇಲೆ ಪ್ರಾಬಲ್ಯ ಹೂಡಲು ಯತ್ನಿಸುತ್ತಿಲ್ಲ ಆದರೆ, ತನ್ನನ್ನು ತಾನು ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕಿದ್ದು, ಉತ್ತಮ ಸ್ನೇಹ ಮತ್ತು ಬಾಂಧವ್ಯ ರೂಪಿಸಲು ಮುಂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT