ಕೊಲಂಬೊ: ಶ್ರೀಲಂಕಾ ನೌಕಾಪಡೆ ಬಂಧಿಸಿದ್ದ 54 ತಮಿಳುನಾಡು ಮೀನುಗಾರರ ಬಿಡುಗೆಡೆಗೆ ಶ್ರೀಲಂಕಾ ಕೋರ್ಟ್ ಮಂಗಳ ಆದೇಶಿಸಿದೆ.
ಉಭಯ ದೇಶಗಳ ಮೀನುಗಾರರ ಪ್ರತಿನಿಧಿಗಳ ಎರಡು ದಿನಗಳ ಮಾತುಕತೆ ಇಂದಿನಿಂದ ಚೆನ್ನೈನಲ್ಲಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇಂದು 54 ಮೀನುಗಾರರನ್ನು ಬಿಡುಗಡೆ ಮಾಡಿದೆ.
ಜಫ್ನಾ ಜಿಲ್ಲೆಯ ಕಾಯ್ಟ್ಸ್‌ನಲ್ಲಿ ಬಂಧಿಸಲಾಗಿದ್ದ 21 ಮೀನುಗಾರರು ಸೇರಿದಂತೆ ಒಟ್ಟು 54 ಮೀನುಗಾರರ ವಿರುದ್ಧದ ಕೇಸ್‌ಗಳನ್ನು ಶ್ರೀಲಂಕಾ ಸರ್ಕಾರ ವಾಪಸ್ ಪಡೆದಿದ್ದು, ಅವರ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ ಎಂದು ಭಾರತೀಯ ಅಧಿಕಾರಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.