ನವದೆಹಲಿ: ಉಗ್ರ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ. ತಪ್ಪಿತಸ್ಥರನ್ನು ಬಂಧಿಸುವುದೊಂದೇ ವಿಧ್ವಂಸಕ ಕೃತ್ಯಗಳಿಂದ ಮುಕ್ತಿ ಪಡೆಯುವ ಮಾರ್ಗ ಎಂದು ಗೃಹ ಸಚಿವ ರಾಜನಾಥ್ ಸಿಂಗ್, ಕರ್ನಾಟಕ, ತಮಿಳುನಾಡು ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬರೆದ ಪತ್ರದಲ್ಲಿ, ಡಿ. 28 2014ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಪೋಟವಾಗಿತ್ತು. ಆದರೆ, ಈ ಸಂಬಂಧ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಕರ್ನಾಟಕವು ಉಗ್ರ ಪ್ರಕರಣಗಳ ತನಿಖೆಗಳನ್ನು ಚುರುಕುಗೊಳಿಸಿದರೆ ಮಾತ್ರ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದಿದ್ದಾರೆ.
ಇನ್ನು ಮೂವರೂ ಮುಖ್ಯಮಂತ್ರಿಗಳಿಗೆ ಉಗ್ರ ಪ್ರಕರಣಗಳನ್ನು ಖುದ್ದು ನೋಡಿ, ಅವುಗಳಿಗೇ ಹೆಚ್ಚು ಆದ್ಯತೆ ಕೊಟ್ಟು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.