ವಿ.ಕೆ ಸಿಂಗ್ ಮತ್ತು ಮನೀಶ್ ತಿವಾರಿ 
ದೇಶ

'ಅಸಹ್ಯ'ವಾದರೆ ವಿ.ಕೆ ಸಿಂಗ್ ರಾಜಿನಾಮೆ ನೀಡಲಿ: ಮನೀಶ್ ತಿವಾರಿ

ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ "ಅಸಹ್ಯ" ಎಂದು ಟ್ವೀಟ್ ಮಾಡಿರುವುದಕ್ಕೆ...

ನವದೆಹಲಿ: ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ "ಅಸಹ್ಯ" ಎಂದು ಟ್ವೀಟ್ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ವಿ.ಕೆ.ಸಿಂಗ್ ಅವರಿಗೆ ಸರ್ಕಾರಗಳ ಬಗ್ಗೆ ಅಸಹ್ಯ ಹುಟ್ಟಿದ್ದರೇ ರಾಜಿನಾಮೆ ನೀಡಲಿ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಸಂಭ್ರಮಾಚರಣೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿ.ಕೆ ಸಿಂಗ್ ಈ ರೀತಿ ಅಸಹ್ಯ ಎಂಬ ಹೇಳಿಕೆಗಳನ್ನು ನೀಡಬಾರದು. ದೇಶವನ್ನು ಪ್ರತಿನಿಧಿಸುವಂತಹ ನಾಯಕರೇ ಇಂತಹ ಹೇಳಿಕೆಗಳನ್ನು ನೀಡಿ, ದೇಶ ತಲೆತಗ್ಗಿಸುವಂತೆ ಮಾಡುತ್ತಾರೆ. ಅವರಿಗೇ ಅಸಹ್ಯವಾದರೇ, ಅದನ್ನು ಟ್ವೀಟ್ ಮಾಡಿ ಹೇಳುವ ಬದಲು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಹೊರಡಲಿ ಎಂದು ಮನೀಷ್ ತಿವಾರಿ ಸವಾಲು ಹಾಕಿದ್ದಾರೆ.

ಮನೀಷ್ ತಿವಾರಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಅವರು, ಸಿಂಗ್ ಅವರು ಏಕೆ ರಾಜಿನಾಮೆ ನೀಡಬೇಕು. ಕಾಂಗ್ರೆಸ್ ನಾಯಕರಂತೇ "ಜೀ ಹುಜೂರ್' ಎಂದು ತಲೆಯಾಡಿಸುವುದಿಲ್ಲವಲ್ಲ ಅದಕ್ಕಾಗಿಯೇ?. ಬಹುಶಃ ಕಾಂಗ್ರೆಸ್ ನವರಿಗೆ ತಲೆಯಾಡಿಸುವಂತ ಪ್ರತಿನಿಧಿಗಳು ಬೇಕಾಗಿದೆ. ಆದರೆ. ಸಿಂಗ್ ಅದಕ್ಕೆ ವಿರುದ್ಧವಾದವರು ಅದಕ್ಕಾಗಿ ಸಿಂಗ್ ಅವರಿಂದ ರಾಜಿನಾಮೆ ಕೇಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಮಾತನಾಡಿದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ "ಕಾರಣವೇ ಇಲ್ಲದೆ ಸುಮ್ಮನೆ ವಿವಾದ ಸೃಷ್ಟಿಸಬೇಡಿ" ಎಂದು ಹುರಿಯತ್ ನಾಯಕರನ್ನು ಸಂಭ್ರಮಾಚರಣೆಗೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ "ನಾವು ಹುರಿಯತ್ ನಾಯಕರನ್ನು ಭೇಟಿ ಮಾಡುತ್ತಿರುವುದನ್ನು ಭಾರತ ಸರ್ಕಾರ ವಿರೋಧಿಸಿಲ್ಲ" ಎಂದು ನುಡಿದಿದ್ದಾರೆ.

ಇದರಿಂದ ಕುಪಿತಗೊಂಡಿರುವ ವಿದೇಶಾಂಗ ಸಚಿವಾಲಯ "ಭಾರತ ಮತ್ತು ಪಾಕಿಸ್ತಾನದ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಎರಡೇ ಪಾರ್ಟಿಗಳು ಇರುವುದು. ಮೂರನೆ ಸಂಘಟನೆಯ ಅವಶ್ಯಕತೆ ಇಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನರಲ್ ವಿಕೆ ಸಿಂಗ್ ಅಲ್ಲಿ ೧೦ ನಿಮಿಷಗಳನ್ನು ಕಳೆದು ಹೊರ ಬಂದ ನಂತರ, ಹುರಿಯತ್ ನಾಯಕರ ಬಗ್ಗೆ ಪಾಕಿಸ್ತಾನ ರಾಯಭಾರಿ ಆಡಿರುವ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ 'ಅಸಹ್ಯ' ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

SCROLL FOR NEXT