ಲಂಡನ್: ಈ ಬಾರಿಯ ಮ್ಯಾನ್ ಬೂಕರ್ ಪ್ರಶಸ್ತಿ ರೇಸ್‍ನಲ್ಲಿ ಅನಿವಾಸಿ ಭಾರತೀಯ ಅಮಿತಾವ್ ಘೋಷ್ ಇದ್ದಾರೆ.
ಇಂಗ್ಲಿಷ್ ಸಾಹಿತ್ಯ ಲೋಕಕ್ಕೆ ನೀಡಿದ ಸಮಗ್ರ ಕೊಡುಗೆ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅಮಿತಾವ್ ಘೋಷ್ ಸೇರಿದಂತೆ ಅರ್ಜೆಂಟೀನಾ, ಲೆಬನಾನ್, ಅಮೆರಿಕ ಮೊದಲಾದ ಹಲವು ರಾಷ್ಟ್ರಗಳ ಇನ್ನೂ 10 ಮಂದಿ ಅಗ್ರಮಾನ್ಯ ಲೇಖಕರು ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.
ಕೋಲ್ಕತಾದಲ್ಲಿ ಜನಿಸಿರುವ ಅವರು 2008ರಲ್ಲಿ `ಸಿ ಆಫ್ಂ ಪಾಪ್ಪಿಸ್ (See of Poppies) ಕೃತಿಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಘೋಷ್ ಅವರು ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.