ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ. ಹೀಗೊಂದು ಪೋಸ್ಟರ್ ಅಮೇಥಿಯಲ್ಲಿ ಕಾಣಿಸಿಕೊಂಡಿದೆ. ಕಾಣೆಯಾಗಿರುವ...

ರಾಹುಲ್ ಗಾಂಧಿ
Rashmi Kasaragodu
Updated On : 25 Mar 2015, 3:39 am

ಲಕ್ನೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ. ಹೀಗೊಂದು ಪೋಸ್ಟರ್ ಅಮೇಥಿಯಲ್ಲಿ ಕಾಣಿಸಿಕೊಂಡಿದೆ. ಕಾಣೆಯಾಗಿರುವ ಅಮೇಥಿ ಸಂಸದನನ್ನು ಹುಡುಕಿಕೊಟ್ಟರೆ ಅಂಥವರಿಗೆ ಬಹುಮಾನವನ್ನು ನೀಡಲಾಗುವುದು  ಎಂದೂ ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಸದ್ಯ ಸಕ್ರಿಯ ರಾಜಕಾರಣದಿಂದ ಬ್ರೇಕ್ ತೆಗೆದುಕೊಂಡಿರುವ ರಾಹುಲ್ ಗಾಂಧಿ ಕಳೆದ ಒಂದು ತಿಂಗಳಿನಿಂದ ಅಜ್ಞಾತವಾಸದಲ್ಲಿದ್ದಾರೆ.

ಸಂಸತ್‌ನಲ್ಲಿ ಬಜೆಟ್ ಅಧಿವೇಶನದ ವೇಳೆ ರಾಹುಲ್ ಗಾಂಧಿ ರಜಾ ತೆಗೆದುಕೊಂಡಿದ್ದರು.  ಜಾನೆ ವೋ ಕೌನ್ ಸಾ ದೇಶ್ ಜಹಾ ತುಮ್ ಚಲೇ ಗಯೇ, ನಾ ಚಿಟ್ಟಿ ನಾ ಸಂದೇಶ್, ಕಹಾ ತುಮ್ ಚಲೇ ಗಯೇ (ನೀನು ಅದ್ಯಾವ ದೇಶಕ್ಕೆ ಹೋಗಿದ್ದಿ?ಪತ್ರವೂ ಇಲ್ಲ, ಸಂದೇಶವೂ ಇಲ್ಲ..ಅದೆಲ್ಲಿಗೆ ಹೋದೆ? ) ಎಂದು ಬರೆದು ಕೆಳಗೆ ಅಮೇಥಿ ಲೋಕಸಭಾ ಕ್ಷೇತ್ರದ ಜನರು ಎಂದು ನಮೂದಿಸಲಾಗಿದೆ.

ಇಲ್ಲಿನ ಬುಲಂದ್‌ಶಹರ್, ಅಲ್ಲಹಾಬಾದ್ ನಲ್ಲಿಯೂ ರಾಹುಸ್ ಕಾಣೆಯಾಗಿದ್ದಾರೆ, ಪತ್ತೆ ಹಚ್ಚಿದವರಿಗೆ ಬಹುಮಾನ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments