ಎಚ್.ಆರ್. ಭಾರದ್ವಾಜ್ 
ದೇಶ

ಸೆಕ್ಷನ್66ಎ ತರುವ ಅವಶ್ಯಕತೆಯೇ ಇರಲಿಲ್ಲ: ಎಚ್.ಆರ್. ಭಾರದ್ವಾಜ್

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣವೊಡ್ಡಿ ಸುಪ್ರೀಂಕೋರ್ಟ್‍ನಿಂದ ಗೇಟ್‍ಪಾಸ್ ಕೊಡಿಸಿಕೊಂಡ ಸೆಕ್ಷನ್ 66ಎ ಸಂಬಂಧ...

ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರಣವೊಡ್ಡಿ ಸುಪ್ರೀಂಕೋರ್ಟ್‍ನಿಂದ ಗೇಟ್‍ಪಾಸ್ ಕೊಡಿಸಿಕೊಂಡ ಸೆಕ್ಷನ್ 66ಎ ಸಂಬಂಧ ಕಾಂಗ್ರೆಸ್‍ನಲ್ಲೇ ಅಪಸ್ವರ ಕೇಳಿಬಂದಿದೆ. ಸೆಕ್ಷನ್ 66ಎ ತರುವ ಅವಶ್ಯಕತೆಯೇ ಇರಲಿಲ್ಲ ಎಂದು ಯುಪಿಎ ಮೊದಲ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಮತ್ತು ಕರ್ನಾಟಕದ ಮಾಜಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬಾಂಬ್ ಸಿಡಿಸಿದ್ದಾರೆ.

ಈ ಕಾನೂನನ್ನು ತರುವ ಅಗತ್ಯವೇ ಇರಲಿಲ್ಲ, ಆದರೆ ತೀರಾ ಅವಸರವಸರವಾಗಿ ಇದನ್ನು ತಿದ್ದುಪಡಿ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ `ಕುಟುಂಬ'ವೊಂದನ್ನು ಕಾಪಾಡುವ ದೃಷ್ಟಿಯಿಂದ ಇದನ್ನು ತರಲಾಗಿತ್ತು ಎಂದೂ ಆಪಾದಿಸಿದ್ದಾರೆ. ಆದರೆ ಆಗ ಇದನ್ನು ತಂದ ಸಚಿವರ್ಯಾರು ಎಂಬುದು ನೆನಪಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ ಕಾನೂನಿಗೆ ತಿದ್ದುಪಡಿ ಮಾಡುವ ಸಲುವಾಗಿ ಮಾಡಬೇಕಿದ್ದ ಯಾವುದೇ ಪ್ರಕ್ರಿಯೆಗಳನ್ನೂ ಪಾಲಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT