ಬಿಜೆಪಿ 
ದೇಶ

ಬಿಜೆಪಿ ಈಗ ವಿಶ್ವದ ಅತಿ ದೊಡ್ಡ ಪಕ್ಷ

ಆಡಳಿತಾರೂಢ ಬಿಜೆಪಿ ಈಗ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ. ಅದರ ಒಟ್ಟು ಸದಸ್ಯರ ಸಂಖ್ಯೆ 8.8 ಕೋಟಿ. ಚೀನಾದ ಕಮ್ಯುನಿಸ್ಟ್ ಪಕ್ಷವನ್ನೂ...

ನವದೆಹಲಿ: ಆಡಳಿತಾರೂಢ ಬಿಜೆಪಿ ಈಗ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ. ಅದರ ಒಟ್ಟು ಸದಸ್ಯರ ಸಂಖ್ಯೆ 8.8 ಕೋಟಿ. ಚೀನಾದ ಕಮ್ಯುನಿಸ್ಟ್ ಪಕ್ಷವನ್ನೂ ಅದು ಮೀರಿಸಿದೆ ಎಂದು ಬಿಜೆಪಿ ನಾಯಕರೇ ಭಾನುವಾರ ಹೇಳಿಕೊಂಡಿದ್ದಾರೆ. ಈ ತಿಂಗಳ 10 ಕೋಟಿ ಸದಸ್ಯರನ್ನು ನೇಮಕ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಗುರಿ ಹಾಕಿಕೊಂಡಿ ದ್ದಾರೆ. ಅದರಂತೆ ಕಳೆದ ವರ್ಷದ ನ.1 ರಂದು ನರೇಂದ್ರ ಮೋದಿ ದೆಹಲಿಯಲ್ಲಿ ಬಹುಹಂತದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಅದರಂತೆ ಕರ್ನಾಟಕ ಸೇರಿ ದೇಶಾದ್ಯಂತ ಪಕ್ಷದ ನಾಯಕರು ಸದಸ್ಯತ್ವ ಅಭಿಯಾನ ಆರಂಭಿಸಿದ್ದರು. ಟ್ವಿಟರ್, ಫೇಸ್ ಬುಕ್ ಸೇರಿದಂತೆ ಪ್ರಮುಖ ಜಾಲ ತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಸದಸ್ಯತ್ವ ಪಡೆಯಲು ಮೊಬೈಲ್ ಸಂಖ್ಯೆಯನ್ನೂ ಆರಂಭಿಸಲಾಗಿತ್ತು. ಸದಸ್ಯರಾಗ ಬಯಸುವವರುಅದಕ್ಕೆ ಡಯಲ್ ಮಾಡಿ ಸದಸ್ಯರಾಗುವವಿಧಾನವನ್ನು ಪರಿಚಯಿಸ ಲಾಗಿದೆ. 
ಇಂದು ಚಾಲನೆ: ಸೋತು ಸುಣ್ಣವಾಗಿರುವ ಕಾಂಗ್ರೆಸ್ ಕೂಡ ಬಿಜೆಪಿ ಮಾದರಿಯಲ್ಲಿ ಹೈಟೆಕ್ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯಲ್ಲಿ ಕಾಂಗ್ರೆಸ್‍ನ ಆನ್‍ಲೈನ್ ಸದಸ್ಯತ್ವಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದಲ್ಲಿ ಅವರು ಹೊಂದಿರುವ ಸದಸ್ಯತ್ವದ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರು ಆನ್‍ಲೈನಲ್ಲಿ ಸದಸ್ಯತ್ವ ನವೀಕರಣಕ್ಕೆಅರ್ಜಿ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!