ದೇಶ

ಭಾರತದ ಆಂತರಿಕ ವಿಚಾರದಲ್ಲಿ ತಲೆಹಾಕದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್

ನವದೆಹಲಿ: ಭಾರತದ ಆಂತರಿಕ ವಿಚಾರಗಳಲ್ಲಿ ತಲೆಹಾಕುವ ಬದಲು ಪಾಕಿಸ್ತಾನ ಮೊದಲು ತನ್ನ ಆಂತರಿಕ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

ವಿವಾದಾತ್ಮಕ ಪಂಡಿತರ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣ ವಿಚಾರ ಕುರಿತಂತೆ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಆಂತರಿಕ ವಿಚಾರದಲ್ಲಿ ಇತರೆ ದೇಶದವರು ತಲೆಹಾಕುವುದನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾನ ಭಾರತದ ಆಂತರಿಕ ವಿಚಾರದಲ್ಲಿ ತಲೆಹಾಕುವ ಬದಲು ತನ್ನ ಆಂತರಿಕ ಸಮಸ್ಯೆಗಳ ಬಗ್ಗೆ ವಿಚಾರ ನಡೆಸಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮತಾಂತರ ವಿಚಾರ ಕುರಿತಂತೆ ಮಾತನಾಡಿರುವ ಅವರು ಆರ್ಎಸ್ಎಸ್ ಹಾಗೂ ಇತರೆ ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ಸಂಘಟನೆಗಳನ್ನು ನಂಬುವ ಜನರು ಮತಾಂತರ ನಿಷೇಧ ಕಾಯ್ದೆಗೆ ಒಪ್ಪುತ್ತಾರೆಯೇ? ಒಂದು ವೇಳೆ ಒಪ್ಪಿಗೆ ನೀಡಿದ್ದೇ ಆದರೆ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ನಾವು ಸಿದ್ಧರಿದ್ದೇವೆ.

ತಾಯಿನಾಡು ಭಾರತದಲ್ಲಿರುವ ಎಲ್ಲಾ ಧರ್ಮಗಳ ಮೇಲೆಯೂ ನಮಗೆ ನಂಬಿಕೆ ಇದೆ. ಮೋದಿ ಸರ್ಕಾರ ಕೋಮು ಗಲಭೆಗಳು ಉಂಟಾಗದಂತೆ ಸೌಹಾರ್ದಯುತವನ್ನು ಕಾಪಾಡಿಕೊಂಡು ಬರುತ್ತಿದೆ. ಕೋಮು ಸೌಹಾರ್ದದ ಬಗ್ಗೆ ಪಾಕಿಸ್ತಾನದಿಂದ ನಾವು ತಿಳಿದುಕೊಳ್ಳಬೇಕಿಲ್ಲ ಹಾಗೂ ಪಾಕಿಸ್ತಾನದ ಗುಣಗಾನಗಳು ನಮಗೆ ಬೇಕಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ರಾಜನಾಥ್ ತಿರುಗೇಟು ನೀಡಿದ್ದಾರೆ.

SCROLL FOR NEXT