ನವದೆಹಲಿ: ಉಗ್ರರನ್ನು ಇತರ ಖೈದಿಗಳಿಂದಾಗಿ ಪ್ರತ್ಯೇಕವಾಗಿರಿಸಿ, ಅವರಿಗಾಗಿ ಹೊಸತೊಂದು ಜೈಲು ನಿರ್ಮಿಸಿ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಕುಖ್ಯಾತ ಖೈದಿಗಳು ಇತರ ಖೈದಿಗಳೊಂದಿಗೆ ಬೆರೆಯುವುದನ್ನು ತಪ್ಪಿಸುವ ಸಲುವಾಗಿಯೇ ಪ್ರತ್ಯೇಕ ಜೈಲು ನಿರ್ಮಾಣ ಮಾಡಬೇಕೆಂಬ ಬೇಡಿಕೆಯೊಡ್ಡಿರುವುದಾಗಿ ಗೃಹ ಸಚಿವಾಲಯ ಹೇಳಿದೆ.
ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ರಾಜ್ಯದ ಹೊರಗೆ ಬೇರೆ ಜೈಲು ನಿರ್ಮಿಸಬೇಕು. ಇದು ಸಾಧ್ಯವಾಗದೇ ಇದ್ದರೆ, ಉಗ್ರರು/ ಶಂಕಿತ ಉಗ್ರರು , ಇತರ ಖೈದಿಗಳು ಹೀಗೆ ಎಲ್ಲರನ್ನೂ ಪ್ರತ್ಯೇಕಿಸಿ ಸೆಂಟ್ರಲ್ ಮತ್ತು ಜಿಲ್ಲಾ ಕಾರಾಗೃಹಗಳಿಗೆ ಕಳುಹಿಸಿ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕುಮಾರ್ ಅಲೋಕ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.